ಸಿದ್ದರಾಮಯ್ಯ ಬಿಜೆಪಿ ಬಗ್ಗೆ ಮಾತಾಡಿರುವ ವಿಡಿಯೋ ಇರಬಹುದು: ಕಾಂಗ್ರೆಸ್ ನಲ್ಲಿ ಹಣ ನೀಡುವ ಪರಂಪರೆ ಇಲ್ಲ- ಸತೀಶ್ ಜಾರಕಿಹೊಳಿ. ಯಾದಗಿರಿ,ಮಾರ್ಚ್,2,2023(..):500 ರೂ. ಕೊಟ್ಟು ಜನ ಕರೆತನ್ನಿ ಎಂದು ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯಿಸಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಬಿಜೆಪಿ ಬಗ್ಗೆ ಮಾತಾಡಿರುವ ವಿಡಿಯೋ ಇರಬಹುದು. ಕಾಂಗ್ರೆಸ್ ನಲ್ಲಿ ಹಣ ನೀಡುವ ಪರಂಪರೆ ಇಲ್ಲ ಎಂದಿದ್ದಾರೆ. ಯಾದಗಿರಿಯಲ್ಲಿ ಇಂದು ಮಾತಾನಾಡಿದ ಸತೀಶ್ ಜಾರಕಿಹೊಳಿ, ನಮ್ಮವರು ಯಾರೂ ಕೂಡ ಹಣ ನೀಡುವ ಪ್ರಯತ್ನ ಮಾಡಿಲ್ಲ. ಜನ ಬರೋಕೆ ವಾಹನ, ಊಟ ನೀಡುತ್ತೇವೆ, ಅದು ಸಾಮಾನ್ಯ. ಹಣ ನೀಡುವ ಪ್ರಶ್ನೆಯೇ ಇಲ್ಲಿ ಬರಲ್ಲ. ಕಾಂಗ್ರೆಸ್​ನಲ್ಲಿ ಹಣ ನೀಡುವ ಪರಂಪರೆ ಇಲ್ಲ ಎಂದು ಹೇಳಿದರು. ಅಧಿಕಾರ ಕಳೆದುಕೊಳ್ಳುತ್ತೇವೆ ಅಂತಾ ಬಿಜೆಪಿ ನಾಯಕರು ಹೆದರಿದ್ದಾರೆ. ಸೋಲುವ ಭೀತಿ ಭಯದಿಂದ ಬಿಜೆಪಿಯವರು ಪದೇ ಪದೇ ರಾಜ್ಯಕ್ಕೆ ಬರುತ್ತಿದ್ದಾರೆ. ಆದರೆ ಚುನಾವಣೆ ಘೋಷಣೆಯಾದಾಗ ಪ್ರಿಯಾಂಕಾ ಗಾಂಧಿ ಸೇರಿದಂತೆ ನಮ್ಮ ರಾಷ್ಟ್ರೀಯ ನಾಯಕರು ಬರುತ್ತಾರೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು. : – –- - - .