ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ: ತ್ರಿಪುರಾದಲ್ಲಿ ಬಿಜೆಪಿ, ಮೇಘಾಲಯದಲ್ಲಿ ಎನ್ ಪಿಪಿ ಮುನ್ನಡೆ. ನವದೆಹಲಿ,ಮಾರ್ಚ್,2,2023(..):ಮೂರು ಈಶಾನ್ಯ ರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗುತ್ತಿದ್ದು ತ್ರಿಪುರಾದಲ್ಲಿ ಬಿಜೆಪಿ, ಮೇಘಾಲಯದಲ್ಲಿ ಎನ್ ಪಿಪಿ ಮುನ್ನಡೆ ಸಾಧಿಸಿದೆ. ಮೇಘಾಲಯದಲ್ಲಿ 59 ಕ್ಷೇತ್ರಗಳ ಪೈಕಿ ಎನ್ ಪಿಪಿ 23 ಕ್ಷೇತ್ರಗಳಲ್ಲಿ ಬಿಜೆಪಿ 12, ಕಾಂಗ್ರೆಸ್ 5 , ಇತರೇ 19 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. ತ್ರಿಪುರಾದಲ್ಲಿ 60 ಕ್ಷೇತ್ರಗಳಲ್ಲಿ ಬಿಜೆಪಿ 36 ,ಸಿಪಿಎಂ+ 12, ಟಿಎಂಪಿ 11, ಇತರೇ 1 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇನ್ನು ನಾಗಲ್ಯಾಂಡ್ 60 ಕ್ಷೇತ್ರಗಳ ಪೈಕಿ ಎನ್ ಡಿಪಿಪಿ+ 48, ಕಾಂಗ್ರೆಸ್ 1, ಎನ್ ಪಿಎಫ್ 6, ಇತರೇ 5 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. : - –- - –