ರಾಜಹಂಸಗಢದಲ್ಲಿ ಶಿವಾಜಿ ಪ್ರತಿಮೆ ಅನಾವರಣಗೊಳಿಸಿದ ಸಿಎಂ ಬೊಮ್ಮಾಯಿ. ಬೆಳಗಾವಿ,ಮಾರ್ಚ್,2,2023(..):ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಬೆಳಗಾವಿಯ ರಾಜಹಂಸಗಢದಲ್ಲಿ ನಿರ್ಮಿಸಲಾಗಿರುವ ಶಿವಾಜಿ ಪ್ರತಿಮೆಯನ್ನ ಸಿಎಂ ಬಸವರಾಜ ಬೊಮ್ಮಾಯಿ ಇಂದು ಅನಾವರಣಗೊಳಿಸಿದರು. ಬೆಳಗಾವಿಯ ರಾಜಹಂಸಗಢದಲ್ಲಿ 50 ಅಡಿ ಎತ್ತರದಲ್ಲಿ ಶಿವಾಜಿ ಪ್ರತಿಮೆ ನಿರ್ಮಾಣ ಮಾಡಲಾಗಿದ್ದು, ಇಂದು ಸಿಎಂ ಬಸವರಾಜ ಬೊಮ್ಮಾಯಿ ಲೋಕಾರ್ಪಣೆ ಮಾಡಿದರು. ಈ ಸಂದರ್ಭಧಲ್ಲಿ ಜಲಸಂಪನ್ಮೂಲ ಸಚಿವ ಗೋವಿಂಧ ಕಾರಜೋಳ, ಶಾಸಕರಾದ ರಮೇಶ್ ಜಾರಕಿಹೊಳಿ, ಅಭಯ್ ಪಾಟೀಲ್, ಅನಿಲ್ ಬೆರಕೆ ಉಪಸ್ಥಿತರಿದ್ದರು. ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಗೈರಾಗಿದ್ದರು. : - - –