ಬೆಳಗಾವಿಯಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ: ಹೂಮಳೆಯ ಸ್ವಾಗತ ಕೋರಿದ ಜನರು. ಬೆಳಗಾವಿ,ಫೆಬ್ರವರಿ,27,2023(..):ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗಾವಿಯಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂಣದ ಆರಂಭವಾದ ರೋಡ್​ ಶೋ, ಪೊಲೀಸ್ ಬಿಗಿ ಬಂದೋಬಸ್ತ್​ನಲ್ಲಿ ಸಾಗಿತು. ಚೆನ್ನಮ್ಮ ವೃತ್ತದಿಂದ ಕಾಲೇಜು ಮಾರ್ಗವಾಗಿ ಸಂಭಾಜಿ ವೃತ್ತ, ಕಿರ್ಲೋಸ್ಕರ್ ರಸ್ತೆ, ಶನಿ ಮಂದಿರ, ಕಪಿಲೇಶ್ವರ ದೇವಸ್ಥಾನ ರಸ್ತೆ, ಶಿವಾಜಿ ಗಾರ್ಡನ್, ಓಲ್ಡ್ ಪಿಬಿ ರೋಡ್ ಮಾರ್ಗವಾಗಿ10.7 ಕಿ.ಮೀ. ರೋಡ್​ಶೋ ನಡೆಸಿ ಮಾಲಿನಿ ಸಿಟಿ ತಲುಪಿದ್ದಾರೆ. . ಬೆಳಗಾವಿಯಲ್ಲಿ ರೋಡ್ ಶೋದಲ್ಲಿ ಭಾಗಿಯಾಗದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಾದಿಯುದ್ದಕ್ಕೂ ಹೂಮಳೆಯ ಸ್ವಾಗತ ದೊರೆಯಿತು. ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರೇ ನಿಂತು ಪ್ರಧಾನಿ ಮೇಲೆ ಹೂಮಳೆಗರೆದರು. ರೋಡ್​ಶೋ ಸಂದರ್ಭ ಪ್ರಧಾನಿ ಮೋದಿಯವರನ್ನು ನೋಡಲು ಜನ ಮುಗಿಬೀಳುತ್ತಿರುವುದು ಕಂಡುಬಂತು. ಕೆಲವೆಡೆ ಜನರು ಕಟ್ಟಡಗಳ ಮೇಲೆ ಹತ್ತಿ ಪ್ರಧಾನಿಯವರನ್ನು ನೋಡಲು ತವಕಿಸುತ್ತಿದ್ದರು. ಇನ್ನು ಬೃಹತ್ ಸಮಾವೇಶ ನಡೆಯಲಿದ್ದು ಜನರನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. : - - - –