ಬಿಎಸ್ ವೈ ಹುಟ್ಟುಹಬ್ಬದ ದಿನವೇ ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ ವಿಶೇಷ ಹಾಗೂ ದೈವ ಇಚ್ಛೆ- ಸಿಎಂ ಬಸವರಾಜ ಬೊಮ್ಮಾಯಿ. ಶಿವಮೊಗ್ಗ,ಫೆಬ್ರವರಿ,27,2023(..):ಬಿಎಸ್ ಯಡಿಯೂರಪ್ಪ ಅವರ ಹುಟ್ಟುಹಬ್ಬದ ದಿನವೇ ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ ವಿಶೇಷ ಹಾಗೂ ದೈವ ಇಚ್ಛೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ನುಡಿದರು. ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆಯಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಶಿವಮೊಗ್ಗಕ್ಕೆ ಆಗಮಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮಲೆನಾಡಿಗೆ ಬಿಎಸ್ ವೈ ಒಂದು ಕಾಣಿಕೆ . ಕರ್ನಾಟಕ ಪ್ರಗತಿಯತ್ತ ಮುನ್ನಡೆಯುತ್ತಿದೆ. ಶಿವಮೊಗ್ಗ ಏರ್ ಪೋರ್ಟ್ ಉದ್ಘಾಟನೆ ಒಂದು ಮೈಲಿಗಲ್ಲು. ಬಿಎಸ್ ವೈ ಪರಿಶ್ರಮದಿಂದ ಏರ್ ಪೋರ್ಟ್ ಆಗಿದೆ. ಮೋದಿ ಸರ್ಕಾರದಲ್ಲಿ ವಿಮಾನಯಾನಕ್ಷೇತ್ರ ಅಭಿವೃದ್ದಿಯಾಗಿದೆ. ಉಡಾನ್ ಯೋಜನೆಯಡಿ ವಿಮಾನ ನಿಲ್ದಾಣಗಳನ್ನ ನಿರ್ಮಿಸಲಾಗಿದೆ ಎಂದರು. ಬಿಎಸ್ ವೈ ಪರಿಶ್ರಮಕ್ಕೆ ಸಂದ ಫಲ. ಮಲೆನಾಡಿನ ಆರ್ಥಿಕ ಪ್ರವಾಸೋದ್ಯಮಕ್ಕೆ ಸಹಕಾರಿಯಾಗಲಿದೆ ಬಿಎಸ್ ವೈ ಹುಟ್ಟುಹಬ್ಬದ ದಿನವೇ ವಿಮಾನ ನಿಲ್ದಾಣ ಉದ್ಘಾಟನೆ ಅತ್ಯಂತ ವಿಶೇಷ ಹಾಗೂ ದೈವ ಇಚ್ಛೆ ಎಂದರು. : – - –- – – - .