ಶ್ರೀಕಂಠೇಶ್ವರನ ಹುಂಡಿ ಎಣಿಕೆ ಕಾರ್ಯ: 1.26 ಕೋಟಿ ರೂ. ಕಾಣಿಕೆ ಸಂಗ್ರಹ. ಮೈಸೂರು ,ಫೆಬ್ರವರಿ,25,2023(..)ಮೈಸೂರು ಜಿಲ್ಲೆ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಒಂದೇ ತಿಂಗಳಿನಲ್ಲಿ ಶ್ರೀಕಂಠೇಶ್ವರ ಕೋಟ್ಯಾಧೀಶನಾಗಿದ್ದಾನೆ. ದಕ್ಷಿಣ ಕಾಶಿ ಶ್ರೀಕಂಠೇಶ್ವರನ ಹುಂಡಿ ಎಣಿಕೆಕಾರ್ಯ ಇಂದು ನಡೆಯಿತು. ಒಂದು ತಿಂಗಳ ನಂತರ ದೇವಸ್ಥಾನದ ಆವರಣದಲ್ಲಿ 33 ಹುಂಡಿಗಳ ಹಣ, ಚಿನ್ನಾಭರಣವನ್ನ ದೇವಸ್ಥಾನ ಸಿಬ್ಬಂದಿ ಎಣಿಕೆ ಮಾಡಿದ್ದು, ರೂ. 1.26 ಕೋಟಿ ಕಾಣಿಕೆ ಸಂಗ್ರಹವಾಗಿದೆ. ಶ್ರೀಕಂಠೇಶ್ವರ ಹುಂಡಿಯಲ್ಲಿ 163 ಯುಎಸ್ ಎ, 20 ಹಾಂಗ್ ಕಾಂಗ್‌ ನ ಡಾಲರ್ ಕಾಣಿಕೆಯಾಗಿ ಬಂದಿದೆ. 1,26,65,782 ರೂ. ನಗದು, 92 ಗ್ರಾಂ 500 ಮಿಲಿ ಗ್ರಾಂ ಚಿನ್ನ, 3 ಕೆಜಿ 750ಗ್ರಾಂ ಬೆಳ್ಳಿ, 9 ವಿದೇಶಿ ಕರೆನ್ಸಿ, 163 ಯುಎಸ್‌ಎ ಡಾಲರ್, 20 ಹಾಂಕ್ ಕಾಂಗ್‌ ಡಾಲರ್ ಸಂಗ್ರಹವಾಗಿದೆ. ಉಪ ವಿಭಾಗಾಧಿಕಾರಿ ಕೆ.ಆರ್.ರಕ್ಷಿತ್, ಮುಜರಾಯಿ ತಹಶೀಲ್ದಾರ್ ಸಿ.ಜಿ.ಕೃಷ್ಣ, ಇಒ ಜಗದೀಶ್ ಕುಮಾರ್, ಎಇಒ ವೆಂಕಟೇಶ್ ಪ್ರಸಾದ್, ಅಕೌಂಟ್ ಸೂಪರಿಂಡೆಂಟ್ ಗುರುಮಲ್ಲಯ್ಯ, ನಂಜನಗೂಡಿನ ಬ್ಯಾಂಕ್ ಆಫ್ ಬರೋಡಾ ಮ್ಯಾನೇಜರ್ ಟಿ.ಕೆ.ನಾಯಕ್ ಸಮ್ಮುಖದಲ್ಲಿ ಎಣಿಕೆ ಕಾರ್ಯ ನಡೆಯಿತು. : - - –- 1.26