ಇಂದಿನಿಂದ ಅಂಬಾರಿ ಉತ್ಸವ ಬಸ್ ಸೇವೆ: ಎಲ್ಲಿಲ್ಲಿ ಸಂಚರಿಸುತ್ತೆ ಬಸ್..? ಬೆಂಗಳೂರು,ಫೆಬ್ರವರಿ,24,2023(..):ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ, ಬೆಂಗಳೂರು ಕೇಂದ್ರೀಯ ವಿಭಾಗದ ವತಿಯಿಂದ ಇಂದಿನಿಂದ ನೂತನ ಅಂಬಾರಿ ಉತ್ಸವ ವೋಲ್ವೋ 9600 ಮಲ್ಟಿ ಆಕ್ಸಲ್ ಸ್ಲೀಪರ್ ಬಸ್ಸುಗಳನ್ನು ನಾಳೆ ಬೆಂಗಳೂರಿನಿಂದ ಈ ಕೆಳಕಂಡ ಸ್ಥಳಗಳಿಗೆ ಕಾರ್ಯಾಚರಣೆ ಮಾಡಲು ಯೋಜಿಸಲಾಗಿದೆ. ಬಸ್ಸುಗಳು ಹೊರಡುವ ಮಾರ್ಗ, ಹೊರಡುವ ಬಸ್ ನಿಲ್ದಾಣ, ಹೊರಡುವ ಸಮಯ ಈವರೆಗೂ ಮುಂಗಡ ಕಾಯ್ದಿರಿಸಿರುವ ಆಸನಗಳ ವಿವರ ಈ‌ ಕೆಳಕಂಡಂತಿದೆ‌. 1.ಬೆಂಗಳೂರು-ಹೈದರಾಬಾದ್, ಕೆಂಪೇಗೌಡ ಬಸ್ ನಿಲ್ದಾಣ, 22:15 ಬುಕ್ಕಿಂಗ್ ಸಂಖ್ಯೆ – 15 ಸೀಟುಗಳು 2.ಬೆಂಗಳೂರು-ಹೈಟೆಕ್ ಸಿಟಿ, ಕೆಂಪೇಗೌಡ ಬಸ್ ನಿಲ್ದಾಣ, 20:15 ಬುಕ್ಕಿಂಗ್ ಸಂಖ್ಯೆ- 21 ಸೀಟುಗಳು 3.ಬೆಂಗಳೂರು-ಸಿಕಂದ್ರಾಬಾದ್, ಕೆಂಪೇಗೌಡ ಬಸ್ ನಿಲ್ದಾಣ, 21:00 ಬುಕ್ಕಿಂಗ್ ಸಂಖ್ಯೆ -22 ಸೀಟುಗಳು 4.ಬೆಂಗಳೂರು-ಪಣಜಿ, ಕೆಂಪೇಗೌಡ ಬಸ್ ನಿಲ್ದಾಣ, 19:28 ಬುಕ್ಕಿಂಗ್ ಸಂಖ್ಯೆ – 14 ಸೀಟುಗಳು 5.ಬೆಂಗಳೂರು-ತ್ರಿಶೂರ, ಶಾಂತಿನಗರ ಬಸ್ ನಿಲ್ದಾಣ, 21:30 ಬುಕ್ಕಿಂಗ್ ಸಂಖ್ಯೆ -35 ಸೀಟುಗಳು 7.ಬೆಂಗಳೂರು-ತಿರುವನಂತಪುರ, ಶಾಂತಿನಗರ ಬಸ್ ನಿಲ್ದಾಣ, 16:13 ಬುಕ್ಕಿಂಗ್ ಸಂಖ್ಯೆ -25 ಸೀಟುಗಳು ಸಾರ್ವಜನಿಕ ಪ್ರಯಾಣಿಕರು ಮೇಲ್ಕಂಡ ಮಾರ್ಗದಲ್ಲಿ ಕಾರ್ಯಾಚರಣೆಯಾಗುವ ಈ ನೂತನ ಅಂಬಾರಿ ಉತ್ಸವ ಬಸ್ ಸೇವೆಯನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕೆಎಸ್ ಆರ್ ಟಿಸಿ ಮನವಿ ಮಾಡಿದೆ. : - - -