ಬಿಜೆಪಿ ಕಾರ್ಯಕರ್ತರೇ ಮೈಮರೆಯಬೇಡಿ: ಸಿದ್ಧರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ಬರುತ್ತೆ ಎಂದ ಸಂಸದ ಪ್ರತಾಪ್ ಸಿಂಹ. ಮೈಸೂರು,ಫೆಬ್ರವರಿ,24,2023(..):ಬಿಜೆಪಿ ಕಾರ್ಯಕರ್ತರೇ ಮೈಮರೆಯಬೇಡಿ: ಸಿದ್ಧರಾಮಯ್ಯ ನೇತೃತ್ವದ ತಾಲಿಬಾನ್ ಸರ್ಕಾರ ಬರುತ್ತೆ ಎಂದು ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಸಂಸದ ಪ್ರತಾಪ್ ಸಿಂಹ, ಬಿಜೆಪಿ ಕಾರ್ಯಕರ್ತರೇ ಮೈಮರೆಯಬೇಡಿ. ಮೈಮರೆತರೆ ರಾಜ್ಯದಲ್ಲಿ ತಾಲಿಬಾನ್ ಸರ್ಕಾರ ಬರುತ್ತದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬರುತ್ತೆ ಎಂದರು. ಸಿದ್ಧರಾಮಯ್ಯ ಪಿಎಫ್ ಐ ಮುಖಂಡರ ಮೇಲಿದ್ದ ಕೇಸ್ ವಾಪಸ್ ಪಡೆದರು. ಇದರ ಪರಿಣಾಮ 2ಡಜನ್ ಹಿಂದೂಗಳ ಹತ್ಯೆಯಾಯಿತು. ಈಗ ಮತ್ತೆ ಸಿದ್ಧರಾಮಯ್ಯ ಸಿಎಂ ಆಗಲು ಹವಣಿಸುತ್ತಿದ್ದಾರೆ. ಹೀಗಾಗಿ ನಮ್ಮ ಕಾರ್ಯಕರ್ತರು ಮೈಮರೆತರೆ ತಾಲಿಬಾನ್ ಸರ್ಕಾರ ಬರುವ ಸಾಧ್ಯತೆ ಇದೆ ಎಂದಿದ್ದಾರೆ. : - – – - -