ಮತಕ್ಕಾಗಿ ಕಾಂಗ್ರೆಸ್ ಓಲೈಕೆ ರಾಜಕಾರಣ: ಕೋಮು ಪ್ರಚೋದನೆಗೆ ಬುನಾದಿ ಹಾಕಿದ್ದು ಸಿದ್ಧರಾಮಯ್ಯ- ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ. ಕೊಪ್ಪಳ,ಫೆಬ್ರವರಿ,22,2023(..):ಯಾರು ಕೇಳದಿದ್ದರೂ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿದ್ದರು. ಈ ಮೂಲಕ ಕೋಮು ಪ್ರಚೋದನೆಗೆ ಬುನಾದಿ ಹಾಕಿದ್ದು ಸಿದ್ಧರಾಮಯ್ಯ. ಮತಕ್ಕಾಗಿ ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡಿತು ಎಂದು ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ ಕಿಡಿಕಾರಿದರು. ಕೊಪ್ಪಳದಲ್ಲಿ ಇಂದು ಮಾತನಾಡಿದ ಕೇಂದ್ರ ಸಚಿವೆ ಶೋಭಾ ಕರಂಧ್ಲಾಜೆ, ಅಭಿವೃದ್ದಿ ಕೆಲಸ ಇಟ್ಟುಕೊಂಡು ಚುನಾವಣೆ ವೇಳೆ ಮತ ಕೇಳುತ್ತೇವೆ. ನಾವು ಯಾವತ್ತೂ ಓಲೈಕೆ ರಾಜಕಾರಣ ಮಾಡಿಲ್ಲ. ಆದರೆ ಯಾರೇ ಕೇಳದಿದ್ರೂ ಸಿದ್ದರಾಮಯ್ಯ ಟಿಪ್ಪು ಜಯಂತಿ ಮಾಡಿದ್ದರು. ಶಾಲಾ ಮಕ್ಕಳಲ್ಲೂ ಜಾತಿಯನ್ನ ತಂದರು. ಪಿಎಫ್ ಐ ಸಂಘಟನೆ ಕಾರ್ಯಕರ್ತರನ್ನ ಬಿಡುಗಡೆ ಮಾಡದರು. ಜಾತಿ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್ ಎಂದು ವಾಗ್ದಾಳಿ ನಡೆಸಿದರು. ಸಿದ್ಧರಾಮಯ್ಯ ಕುರಿತು ಸಚಿವ ಅಶ‍್ವಥ್ ನಾರಾಯಣ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಎಲ್ಲ ಪಕ್ಷಗಳಿಗೆ ಅವರದ್ಧೇ ಆದ ತತ್ವ ಸಿದ್ಧಾಂತಗಳಿವೆ. ಯಾರೇ ಆಗಲಿ ಕೊಲ್ಲುವ ಬಗ್ಗೆ ಮಾತನಾಡಬಾರದು. ಅಶ್ವಥ್ ನಾರಾಯಣ್ ಅವರು ಸಿದ್ಧರಾಮಯ್ಯರನ್ನ ಟಿಪ್ಪು ಹೊಡೆದಂತೆ ಹೊಡೆಯಬೇಕು ಎಂದು ನೀಡಿದ ಹೇಳಿಕೆ ಸರಿಯಲ್ಲ ಎಂದು ತಿಳಿಸಿದರು. : - - --