ಇಂತಹ ಘಟನೆಗಳಿಂದ ಸರ್ಕಾರಕ್ಕೆ ಮುಜುಗರ: ಇಬ್ಬರು ಅಧಿಕಾರಿಗಳ ಮೇಲೆ ಕ್ರಮ- ಗೃಹ ಸಚಿವ ಅರಗ ಜ್ಞಾನೇಂದ್ರ. ಬೆಂಗಳೂರು,ಫೆಬ್ರವರಿ,21,2023(..):ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ರೂಪಾ ಮೌದ್ಗಿಲ್ ನಡುವಿನ ಕಿತ್ತಾಟಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಇಂತಹ ಘಟನೆಗಳಿಂದ ಸರ್ಕಾರಕ್ಕೆ ಮುಜುಗರವುಂಟಾಗಿದೆ. ಇಬ್ಬರು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ. ಈ ಕುರಿತು ಮಾತನಾಡಿದ ಗೃಹ ಸಚಿವ ಅರಗ ಜ್ಞಾನೇಂದ್ರ., ಐಎಎಸ್ ಐಪಿಎಸ್ ಜವಾಬ್ದಾರಿಯುತ ಅಧಿಕಾರಿಗಳು ರೋಲ್ ಮಾಡೆಲ್ ಆಗುತ್ತಾರೆ. ಇಂಥ ಘಟನೆಯಿಂದ ಸರ್ಕಾರಕ್ಕೆ ಮುಜುಗರ ಒಳ್ಳೇ ಕೆಲಸ ಮಾಡಿ ಹೆಸರು ಗಳಿಸಲಿ ಎಂದರು. ಸಿಎಂ ಹಾಗೂ ಸಿಎಸ್ ನಿರ್ಧಾರ ಮಾಡಿ ಕ್ರಮ ತೆಗೆದುಕೊಂಡಿದ್ದಾರೆ. ಕಾನೂನು ಪ್ರಕಾರ ಯಾವ ಕ್ರಮ ಆಗಬೇಕು ಅದನ್ನ ಮಾಡಿದ್ದಾರೆ ಈ ಇಬ್ಬರು ಅಧಿಕಾರಿಗಳ ಮೇಲೆ ಕ್ರಮ ಕೂಡ ಆಗುತ್ತದೆ. . ಈ ರೀತಿ ಕಿತ್ತಾಟವಾದರೇ ಎಲ್ಲರಿಗೂ ಕೆಟ್ಟ ಹೆಸರು. ಇಬ್ಬರು ನಡುವಿನ ಜಗಳ ನಿಲ್ಲಬೇಕು ಎಂದರು. : - –- – - .