ಹಾರೋಹಳ್ಳಿ ನೂತನ ತಾಲ್ಲೂಕು ಕಚೇರಿ ಉದ್ಘಾಟಿಸಿದ ಸಚಿವ ಅಶ್ವಥ್ ನಾರಾಯಣ್. ರಾಮನಗರ,ಫೆಬ್ರವರಿ,21,2023(..):ರಾಮನಗರ ಜಿಲ್ಲೆಯ ಹಾರೋಹಳ್ಳಿ ನೂತನ ತಾಲ್ಲೂಕು ಕಚೇರಿಯನ್ನ ಜಿಲ್ಲಾ ಉಸ್ತುವಾರಿ ಸಚಿವ ಅಶ್ವಥ್ ನಾರಾಯಣ್ ಉದ್ಘಾಟಿಸಿದರು. ರಾಮನಗರ ಜಿಲ್ಲೆಯ 5ನೇ ತಾಲ್ಲೂಕಾಗಿ ಹಾರೋಹಳ್ಳಿ ಘೋಷಣೆಯಾಗಿದೆ. 2019 ರಲ್ಲಿ ಹಾರೋಹಳ್ಳಿ ನೂತನ ತಾಲ್ಲೂಕಾಗಿ ಘೋಷಣೆಯಾಗಿತ್ತು. ಮೈತ್ರಿ ಸರ್ಕಾರದಲ್ಲಿ ಹೆಚ್.ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಬಜೆಟ್ ನಲ್ಲಿ ಹಾರೋಹಳ್ಳಿಯನ್ನ ನೂತನ ತಾಲ್ಲೂಕಾಗಿ ಘೋಷಣೆ ಮಾಡಿದ್ದರು. ಇದೀಗ ನೂತನ ತಾಲ್ಲೂಕು ಕಚೇರಿಯನ್ನ ಸಚಿವ ಅಶ‍್ವಥ್ ನಾರಾಯಣ್ ಉದ್ಘಾಟಿಸಿದ್ದಾರೆ. : - - – - – .