ಬಿಜೆಪಿಯವರದ್ದು ಯಾವಾಗಲೂ ಹೊಡಿ ಬಡಿ ಸಂಸ್ಕೃತಿ- ಸಚಿವ ಅಶ್ವಥ್ ನಾರಾಯಣ್ ಹೇಳಿಕೆಗೆ ಸಿದ್ಧರಾಮಯ್ಯ ಅಸಮಾಧಾನ. ಹುಬ್ಬಳ್ಳಿ,ಫೆಬ್ರವರಿ,16,2023(..):ಟಿಪ್ಪು ಹೊಡೆದಂತೆ ಸಿದ್ಧರಾಮಯ್ಯರನ್ನೂ ಹೊಡೆಯಬೇಕು ಎಂದು ಹೇಳಿಕೆ ನೀಡಿದ್ಧ ಸಚಿವ ಅಶ್ವಥ್ ನಾರಾಯಣ್ ವಿರುದ್ಧ ಮಾಜಿ ಸಿಎಂ ಸಿದ‍್ಧರಾಮಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾತನಾಡಿದ ಸಿದ್ಧರಾಮಯ್ಯ, ಒಂದು ಜೀವ ರಕ್ಷಣೆ ಮಾಡಬೇಕಾದವರು ಯಾರು..? ಟಿಪ್ಪು ರೀತಿ ಸಿದ್ಧರಾಮಯ್ಯರನ್ನ ಮುಗಿಸಿ ಎಂದರೇ ಏನರ್ಥ..? ಬಿಜೆಪಿಯವರದ್ದು ಯಾವಾಗಲೂ ಹೊಡಿ ಬಡಿ ಸಂಸ್ಕೃತಿ, ಪ್ರಧಾನಿ ಮೋದಿ ಈ ಮಾತು ಸರಿನಾ ತಪ್ಪಾ ಅಂತಾ ಹೇಳಲಿ ಎಂದರು. ನಾನು ಅಶ್ವಥ್ ನಾರಾಯಣ್ ವಿರುದ್ದ ದೂರು ಕೊಡೊಲ್ಲ. ಸರ್ಕಾರ ಹಾಗೂ ಪೊಲೀಸರೇ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಹೇಳಿದರು. : - – -- - - –