ಕಾಂಗ್ರೆಸ್ ನಾಯಕರು ಹುಚ್ಚರು: ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ- ಮಾಜಿ ಸಿಎಂ ಬಿಎಸ್ ವೈ ಕಿಡಿ. ಬೆಂಗಳೂರು,ಫೆಬ್ರವರಿ,15,2023(..):ರಾಜ್ಯ ಸರ್ಕಾರದ ವಿರುದ್ಧ ಟೆಂಡರ್ ಗೋಲ್ಮಾಲ್ ಆರೋಪ ಮಾಡಿದ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಕಾಂಗ್ರೆಸ್ ನಾಯಕರು ಹುಚ್ಚರು,ತಲೆ ತಿರುಕರು. ಅವರ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದಿದ್ದಾರೆ. ಬೆಂಗಳೂರಿನಲ್ಲಿ ಇಂದು ಮಾತನಾಡಿದ ಬಿಎಸ್ ಯಡಿಯೂರಪ್ಪ, ತಲೆ ಸರಿ ಇದ್ದವರು ಈ ರೀತಿ ಮಾತನಾಡೋದಿಲ್ಲ, ಅಧಿಕಾರದ ಭ್ರಮೆಯಿಂದ ಈ ರೀತಿ ಮಾತನಾಡುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದೇ ಬಿಟ್ಟಿದ್ದೇವೆ ಅಂತಾ ಕನಸು ಕಾಣ್ತಿದ್ದಾರೆ. ಕಾಂಗ್ರೆಸ್​ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಸದನದಲ್ಲಿ ಮಾತನಾಡಲಿ ತಕ್ಕ ಉತ್ತರ ಕೊಡುತ್ತೇವೆ ಎಂದರು. ವಿಪಕ್ಷ ನಾಯಕರಾಗಿ ಈ ರೀತಿಯ ಹೇಳಿಕೆ ಸರಿಯಲ್ಲ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಆ ರೀತಿಯಾಗಿ ನಡೆದುಕೊಳ್ಳಬಹುದಾ..? ಕಾಂಗ್ರೆಸ್ ಪಕ್ಷದವರಿಗೆ ಕೇವಲ ಚುನಾವಣೆಯೇ ಮುಖ್ಯಾವಾಯಿತಾ..? ಆರೋಪ ಮಾಡಿ ಹುಚ್ಚು ಹುಚ್ಚಾಗಿ ಆಡೋದು ಜಾಸ್ತಿಯಾಗಿದೆ. ಡಿಕೆ ಶಿವಕುಮಾರ್ ಈ ಮಟ್ಟಕ್ಕೆ ಇಳಿದಿರುವುದು ನನಗೆ ತುಂಬಾ ನೋವಾಗಿದೆ ಇನ್ನಾದ್ರೂ ಜವಾಬ್ದಾರಿಯುತ ಮಾತನಾಡಲಿ ಎಂದು ಅಸಮಾಧಾನ ವ್ಯಕ್ತಪಡಿಸಿದರು. : - – - -