ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ಧರಾಮಯ್ಯ ಕಾರಣ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ. ಹುಬ್ಬಳ್ಳಿ,ಫೆಬ್ರವರಿ,13,2023(..):ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಸಿದ್ಧರಾಮಯ್ಯ ಕಾರಣ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹೇಳಿದರು. ಇಂದುಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸಿದ್ಧರಾಮಯ್ಯ ಅಲ್ಲ, ಸುಳ್ಳಿನರಾಮಯ್ಯ. ಮೈತ್ರಿ ಸರ್ಕಾರ ಬಂದ 2ತಿಂಗಳಲ್ಲೆ ಪತನದ ಬಗ್ಗೆ ಹೇಳಿದ್ದರು. ಮೈತ್ರಿ ಸರ್ಕಾರ ತೆಗೆಯುತ್ತೇನೆ ಅಂದಿದ್ದರು. ಬಿಹೆಪಿ ಅಧಿಕಾರಕ್ಕೆ ಬರಲು ಸಿದ್ಧರಾಮಯ್ಯ ಕಾರಣ ಬಿಜೆಪಿ ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಸುಫಾರಿ ಪಡೆದಿದ್ದರು. ಬಿಎಸ್ ವೈ ಜೊತೆ ಕೈಜೋಡಿಸಿದ್ದರು ಎಂದು ಆರೋಪಿಸಿದರು. ಬಿಜೆಪಿ ಅಕ್ರಮ ಹೊರತಂದಿದ್ದು ನಾನು ಸಿದ್ಧರಾಮಯ್ಯ ಅಲ್ಲ. ಸಿದ್ದರಾಮಯ್ಯ ಕುರ್ಚಿಗಾಗಿ ಕುತಂತ್ರದ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯವರು ನನಗೆ ಸಿಎಂ ಸ್ಥಾನ ಕೊಡುವುದಕ್ಕೆ ಮುಂದಾಗಿದ್ದರು. 10 ವರ್ಷವಾದರೂ ಕಾಂಗ್ರೆಸ್ ನವರಿಗೆ ಇವರಿಗೆ ಬಿಜೆಪಿ ತೆಗೆಯಲು ಸಾಧ್ಯವಿಲ್ಲ. ಜೆಡಿಎಸ್ ನಿಂದ ಮಾತ್ರ ಬಿಜೆಪಿ ತೆಗೆಯಲು ಸಾಧ್ಯ ಎಂದು ಹೆಚ್ ಡಿಕೆ ಹೇಳಿದರು. : – – - – - - ..