ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅನಿವಾರ್ಯ ಅಲ್ಲ- ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ. ಬೆಳಗಾವಿ,ಫೆಬ್ರವರಿ,10,2023(..):ಹಾಸನ ಕ್ಷೇತ್ರ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಮಾತನಾಡಿದ್ದು, ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಅನಿವಾರ್ಯ ಅಲ್ಲ. ಹೊಳೆನರಸೀಪುರ, ಹಾಸನ ಎರಡು ಕ್ಷೇತ್ರಗಳ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು. ಬೆಳಗಾವಿಯಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಗೆಲ್ಲುವ ಅಭ್ಯರ್ಥಿಯನ್ನ ಹಾಸನಕ್ಕೆ ಹಾಕುತ್ತೇನೆ. ಹಾಸನ ಮತ್ತು ಹೊಳೇನರಸಿಪುರ ಕ್ಷೇತ್ರದ ಬಗ್ಗೆ ಪಕ್ಷದ ಚೌಕಟ್ಟಿನಲ್ಲಿ ಕುಳಿತು ಚರ್ಚೆ ಮಾಡುತ್ತೇವೆ. ಟಿಕೆಟ್ ವಿಚಾರವಾಗಿ ಗೊಂದಲಕ್ಕೆ ಎಡೆ ಮಾಡಿಕೊಡಲ್ಲ ಎಂದರು. ಉತ್ತರಕನ್ನಡ ಜಿಲ್ಲೆಯಲ್ಲಿ 4 ಅಭ್ಯರ್ಥಿ ಘೋಷಿಸಬೇಕಿದೆ. 2ನೇ ಹಂತದಲ್ಲಿ 60 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುತ್ತೇವೆ. ವಿಶ್ರಾಂತಿ ತೆಗೆದುಕೊಳ್ಳದೆ ನಾಡಿನ ಜನರ ನಡುವೆ ಇರಲು ಬಯಸುತ್ತೇನೆ. ಪಂಚರತ್ನಯಾತ್ರೆ ನೋಡಿ ಬಿಜೆಪಿಯವರಿಗೆ ಭಯ ಶುರುವಾಗಿದೆ. ರಾಜ್ಯದಲ್ಲಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದರೆ 5 ಯೋಜನೆ ಜಾರಿ ಮಾಡುತ್ತೇವೆ. ಪಂಚರತ್ನಯಾತ್ರೆಯ ಯೋಜನೆಗಳನ್ನ ಚಾರಿ ಮಾಡುತ್ತೇವೆ ಎಂದು ಹೆಚ್.ಡಿಕೆ ತಿಳಿಸಿದರು. : – – - - - .