ಮತ್ತೆ ಮಂಡ್ಯ ಜಿಲ್ಲಾ ಉಸ್ತುವಾರಿ ಬದಲಾವಣೆ.. ಬೆಂಗಳೂರು,ಫೆಬ್ರವರಿ,10,2023(..):ಇತ್ತೀಚೆಗಷ್ಟೆ ಮಂಡ್ಯ ಜಿಲ್ಲಾ ಉಸ್ತವಾರಿ ಸಚಿವ ಸ್ಥಾನದಿಂದ ಗೋಪಾಲಯ್ಯ ಅವರಿಗೆ ಕೋಕ್ ನೀಡಿ ಸಚಿವ ಆರ್. ಅಶೋಕ್ ಅವರಿಗೆ ನೀಡಲಾಗಿತ್ತು. ಇದೀಗ ಮತ್ತೆ ಮಂಡ್ಯ ಜಿಲ್ಲಾ ಉಸ್ತುವಾರಿ ಬದಲಾವಣೆ ಮಾಡಲಾಗಿದೆ. ಮಂಡ್ಯ ಜಿಲ್ಲಾ ಉಸ್ತುವಾರಿಯಿಂದ ಸಚಿವ ಆರ್.ಅಶೋಕ್ ಅವರನ್ನ ಮುಕ್ತ ಮಾಡಲಾಗಿದೆ. ಮಂಡ್ಯ ಉಸ್ತುವಾರಿಯಿಂದ ಮುಕ್ತ ಮಾಡಿ ಎಂದು ಸಿಎಂ ಬಸವರಾಜ ಬೊಮ್ಮಾಯಿಗೆ ಸಚಿವ ಆರ್.ಅಶೋಕ್ ಪತ್ರ ಬರೆದಿದ್ದರು. ಈ ಕುರಿತು ಮಾತನಾಡಿರು ಸಿಎಂ ಬಸವರಾಜ ಬೊಮ್ಮಾಯಿ, ಕಂದಾಯಸಚಿವ ಆರ್.ಅಶೋಕ್ ಅವರಿಗೆ ಬೇರೆಯ ಹಲವು ಕಾರ್ಯಕ್ರಮಗಳ ಜವಾಬ್ದಾರಿ ನೀಡಲಾಗಿದ್ದು ಈ ಹಿನ್ನೆಲೆಯಲ್ಲಿ ಅವರನ್ನ ಮಂಡ್ಯ ಜಿಲ್ಲಾ ಉಸ್ತುವಾರಿಯಿಂದ ಮುಕ್ತ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದರು. : – - - -