ಕಾಂಗ್ರೆಸ್ ಸೇರ್ಪಡೆ ಕುರಿತು ಮಾತನಾಡಿದ ಜೆಡಿಎಸ್ ಶಾಸಕ ಶಿವಲಿಂಗೇಗೌಡ: ಆಡಿಯೋ ವೈರಲ್. ಹಾಸನ,ಫೆಬ್ರವರಿ,9,2023(..):ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತರ ರಾಜಕೀಯ ಕಣ ರಂಗೇರುತ್ತಿದ್ದು ಪಕ್ಷಾಂತರ ಪರ್ವ ಆರಂಭವಾಗಿದೆ. ಈ ಮಧ್ಯೆ ಅರಸೀಕೆರೆ ಜೆಡಿಎಸ್​ ಶಾಸಕ‌ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋ ವೈರಲ್​ ಆಗಿದ್ದು, ಆ ಆಡಿಯೋದಲ್ಲಿ ಕಾಂಗ್ರೆಸ್ ಸೇರ್ಪಡೆ ಕುರಿತು ಮಾತನಾಡಿದ್ದಾರೆ ಎನ್ನಲಾಗಿದೆ. ಕಾರ್ಯಕರ್ತರೊಬ್ಬರ ಜೊತೆ ಮಾತನಾಡಿರುವ ಶಾಸಕ ಶಿವಲಿಂಗೇಗೌಡ ನಾನು ಕಾಂಗ್ರೆಸ್ ಸೇರಿದ್ರೆ ಐವತ್ತು ಸಾವಿರ ಲೀಡಲ್ಲಿ ಗೆಲ್ತಿನಿ ಎಂದಿದ್ದಾರೆ. ಯಾವನಲ್ಲಾ ಯಾವನಪ್ಪ ಬಂದ್ರೂ ನಾನು ಗೆಲ್ಲುತ್ತೇನೆ. ಯಾರೇ ಬಂದರೂ ಗೆಲ್ಲೋದು ಮಾತ್ರ ನಾನೇ ಎಂದು ಹೇಳಿದ್ದು ಇದೀಗ ಇದು ರಾಜ್ಯ ರಾಜಕಾರಣದಲ್ಲಿ ಬಾರಿ ಸಂಚಲನ ಮೂಡಿಸಿದೆ. ಶಾಸಕ ಶಿವಲಿಂಗೇಗೌಡ ಕಳೆದ ಒಂದು ವರ್ಷದಿಂದ ಜೆಡಿಎಸ್​ನಿಂದ ದೂರ ಉಳಿದಿದ್ದಾರೆ. ಶಿವಲಿಂಗೇಗೌಡ ಕಾಂಗ್ರೆಸ್​ ಸೇರ್ತಾರೆ ಎಂಬ ಬಗ್ಗೆ ವದಂತಿ ಕೂಡ ಈ ಹಿಂದೆ ಹರಡಿತ್ತು. ಇದೀಗ ತಾವು ಕಾಂಗ್ರೆಸ್ ಸೇರಿದ್ರೆ ದೊಡ್ಡ ಮಟ್ಟದ ಲೀಡಲ್ಲಿ ಗೆಲ್ತಿನಿ ಎಂದು ವಿಶ್ವಾಸದ ಮಾತುಗಳನ್ನಾಡಿದ್ದಾರೆ. : -- –- - -.