ಪರೀಕ್ಷೆಗೆ ಅಂತಿಮ ಸಿದ್ಧತೆ: ಫೆ.27ರಿಂದ ವಿದ್ಯಾರ್ಥಿಗಳಿಗೆ ಆಕಾಶವಾಣಿ ಮೂಲಕ ವಿಷಯ ತಜ್ಞರಿಂದ ಕ್ಲಾಸ್. ಬೆಂಗಳೂರು,ಫೆಬ್ರವರಿ,9,2023(..): ಪರೀಕ್ಷೆಗೆ ವಿದ್ಯಾರ್ಥಿಗಳು ಕೊನೆಯಹಂತದಲ್ಲಿ ಸಿದ್ದತೆ ಮಾಡಿಕೊಳ್ಳಲು ಪೆಬ್ರವರಿ 27 ರಿಂದ ಮಾರ್ಚ್23 ರ ವರೆಗೆ ಆಕಾಶವಾಣಿಯ ಮುಖಾಂತರ ವಿಷಯ ತಜ್ಞರಿಂದ ತರಗತಿಗಳು ನಡೆಯಲಿದ್ದು ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಲು ಕೋರಿದೆ. ಪೆಬ್ರವರಿ 27 ರಿಂದ ಮಾರ್ಚ್23 ರ ವರೆಗೆ ಸೋಮವಾರದಿಂದ ಗುರುವಾರದ ವರೆಗೆ ಮಧ್ಯಾಹ್ನ 2.35 ರಿಂದ 3 ಗಂಟೆವರೆಗೆ ರಾಜ್ಯದ ಎಲ್ಲಾ ಬಾನುಲಿ ಕೇಂದ್ರಗಳಿಂದ ಪ್ರಸಾರವಾಗಲಿದೆ. ವೇಳಾಪಟ್ಟಿ ಹೀಗಿದೆ. 27-02-23 ಕನ್ನಡ ಪ್ರಥಮಭಾಷೆ. 28-02-23- ಇಂಗ್ಲಿಷ್ ದ್ವಿತೀಯ ಭಾಷೆ. 01-03-23–ವಿಜ್ನಾನ (ಭೌತಶಾಸ್ತ್ರ. ರಸಾಯನಶಾಸ್ತ್ರ). 02-03-23 ವಿಜ್ನಾನ (ಜೀವ ಶಾಸ್ರ). 06-03-23 ಗಣಿತ (ಅಂಕಗಣಿತ.ಬೀಜಗಣಿತ). 07-03-23 ಗಣಿತ (ರೇಖಾಗಣಿತ). 08-03-23 ಸಮಾಜ ವಿಜ್ಞಾನ (ಇತಿಹಾಸ.ರಾಜ್ಯಶಾಸ್ತ್ರ). 09-03-23 ಸಮಾಜ ವಿಜ್ನಾನ (ಭೂಗೋಳ ಅರ್ಥಶಾಸ್ತ್ರ) 13-03-23 ಹಿಂದಿ ತ್ರತೀಯ ಭಾಷೆ 14-03-23 ಸಂಸ್ಕೃತ ಪ್ರಥಮಬಾಷೆ. 15-03-23 ಇಂಗ್ಲಿಷ್ ಪ್ರಥಮ ಭಾಷೆ.. 16-03-23 ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕರಾದ ಹೆಚ್ ಎನ್ ಗೋಪಾಲಕೃಷ್ಣ ಅವರಿಂದ ಮಾಹಿತಿ. 20-03-23 ಮಕ್ಕಳು ಪರೀಕ್ಷೆ ಬರೆಯುವಕ್ರಮ. 21-03-23 ಪರೀಕ್ಷಾ ಸಮಯದಲ್ಲಿ ಆಹಾರ ಮತ್ತು ಆರೋಗ್ಯ ಹೇಗಿರಬೇಕು. 23-03-23 ಉರ್ದು ಪ್ರಥಮ ಭಾಷೆ ‌ ಈ ಕಾರ್ಯಕ್ರಮ ಸರಣಿಯನ್ನು ಪ್ರಸಾರ ಸಮಯದಲ್ಲಿ . ನಲ್ಲೂ. ನಲ್ಲೂ ಕೇಳಬಹುದು.ಪ್ರಸಾರ ನಂತರ ನ 2023 ನಲ್ಲಿ ಲಭ್ಯವಾಗುತ್ತದೆ. : -----