ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಟ್ಯಾಕ್ಟರ್ ಮೇಲಿಂದ ಬಿದ್ದು ಸಾವು. ಧಾರವಾಡ,ಫೆಬ್ರವರಿ,9,2023(..):ರಜೆ ಮೇಲೆ ಊರಿಗೆ ಬಂದಿದ್ದ ಯೋಧ ಟ್ಯಾಕ್ಟರ್ ಮೇಲಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡ ತಾಲೂಕಿನ ಗರಗ-ಲೋಕೂರ ಕ್ರಾಸ್‌ ನಲ್ಲಿ ಈ ಘಟನೆ ನಡೆದಿದೆ. ನಾಗಪ್ಪ ಉದ್ಮೀಶಿ (27) ಮೃತ ಯೋಧ. ನಾಗಪ್ಪ ಉದ್ಮೀಶಿ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದವರಾಗಿದ್ದಾರೆ. ಈ ನಡುವೆ ಗ್ರಾಮಸ್ಥರೊಂದಿಗೆ ಗರಗ ಮಡಿವಾಳೇಶ್ವರ ಜಾತ್ರೆಗೆ ನಾಗಪ್ಪ ಉದ್ಮೀಶಿ ಬಂದಿದ್ದರು. ಬಳಿಕ ಜಾತ್ರೆ ಮುಗಿಸಿಕೊಂಡು ವಾಪಸ್ಸ್​ ಮರಳುತ್ತಿದ್ದಾಗ ಟ್ರ್ಯಾಕ್ಟರ್‌ನಿಂದ ಕೆಳಗೆ ಬಿದ್ದು ತಲೆಗೆ ಪೆಟ್ಟಾಗಿ ನಾಗಪ್ಪ ಉದ್ಮೀಶಿ ಮೃತಪಟ್ಟಿದ್ದಾರೆ. ಈ ಕುರಿತು ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - – – -