ಶಿವಮೊಗ್ಗ ಏರ್ ಪೋರ್ಟ್ ಗೆ ನನ್ನ ಹೆಸರಿಡುವುದು ಬೇಡ- ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ. ರಾಯಚೂರು,ಫೆಬ್ರವರಿ,9,2023(..):ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೆಸರಿಡಲು ಸರ್ಕಾರ ಮುಂದಾಗಿದ್ದು ಈ ಕುರಿತು ಪ್ರತಿಕ್ರಿಯಿಸಿರುವ ಬಿಎಸ್ ವೈ, ಏರ್ ಪೋರ್ಟ್ ಗೆ ನನ್ನ ಹೆಸರಿಡುವುದು ಬೇಡ ಎಂದಿದ್ದಾರೆ. ರಾಯಚೂರಿನ ಸಿಂಧನೂರಿನಲ್ಲಿ ಮಾತನಾಡಿದ ಬಿಎಸ್ ಯಡಿಯೂರಪ್ಪ, ಏರ್ ಪೋರ್ಟ್ ಗೆ ನನ್ನ ನನ್ನ ಹೆಸರಿಡಬೇಡಿ ಎಂದು ಹೇಳಿದ್ದೇನೆ. ಕೇಂದ್ರದವರು ಏನು ಮಾಡುತ್ತಾರೋ ಗೊತ್ತಿಲ್ಲ ಎಂದರು. ಬಿಜೆಪಿಯಲ್ಲಿ ತಮ್ಮನ್ನು ಸೈಡ್ ಲೈನ್ ಮಾಡುತ್ತಿದ್ದಾರೆಂಬ ಆರೋಪ ಕುರಿತು ಪ್ರತಿಕ್ರಿಯಿಸಿದ ಬಿಎಸ್ ಯಡಿಯೂರಪ್ಪ, ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ. ಸೈಡ್ ಲೈನ್ ಅಂದ್ರೆ ಏನು. ನನಗೆ ಯಾವುದೇ ಕೊರತೆ ಇಲ್ಲ, ತೃಪ್ತನಾಗಿದ್ದೇನೆ ರಾಷ್ಟ್ರಮಟ್ಟದಲ್ಲೂ ಜವಾಬ್ದಾರಿ ಕೊಟ್ಟಿದ್ದಾರೆ ಎಂದರು. ಪ್ರಧಾನಿ ಮೋದಿ ಅಮಿತ್ ಶಾ ಎಲ್ಲ ರೀತಿಯ ಸಹಕಾರ ಬೆಂಬಲ ನೀಡಿದ್ದಾರೆ. ಮೋದಿ ಅಮಿತ್ ಶಾ ನೇತೃತ್ವದಲ್ಲಿ ಚುನಾವಣೆ ಎದುರಿಸುತ್ತೇವೆ. ಮುಂದಿನ ಚುನಾವಣೆಯಲ್ಲಿ ಬಹುಮತ ಪಡೆದು ಸರ್ಕಾರ ರಚಿಸುತ್ತೇವೆ. ನಾವೇ ಸಿಎಂ ಅಂತಾ ಕಾಂಗ್ರೆಸ್ ನವರು ತಿರುಕನ ಕನಸು ಕಾಣುತ್ತಿದ್ದಾರೆ. ಅಧಿವೇಶನ ಮುಗಿದ ಬಳಿಕ ಪ್ರವಾಸ ಕೈಗೊಳ್ಳುತ್ತೇನೆ ಎಂದರು. ಬ್ರಾಹ್ಮಣ ಸಿಎಂ ಹೇಳಿಕೆ ಕುರಿತು ಮಾತನಾಡಿದ ಬಿಎಸ್ ಯಡಿಯೂರಪ್ಪ, ಈ ರೀತಿಯ ಹೇಳಿಕೆ ಕುಮಾರಸ್ವಾಮಿಗೆ ಶೋಭೆ ತರುವಂತಹದಲ್ಲ. ಹೆಚ್.ಡಿ ಕುಮಾರಸ್ವಾಮಿ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದರು. : --- - .