ಪ್ರಬಲ ಭೂಕಂಪಕ್ಕೆ ತತ್ತರಿಸಿದ ಟರ್ಕಿ, ಸಿರಿಯಾ : 4 ಸಾವಿರಕ್ಕೂ ಹೆಚ್ಚು ಜನರ ಸಾವು: ಭಾರತದಿಂದ ನೆರವು. ಟರ್ಕಿ,ಫೆಬ್ರವರಿ,7,2023(..):ಟರ್ಕಿ ಮತ್ತು ಸಿರಿಯಾ ಪ್ರಬಲ ಭೂಕಂಪನದಿಂದ ತತ್ತರಿಸಿದ್ದು 4 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪಕದಲ್ಲಿ 7.8 ತೀವ್ರತೆ ದಾಖಲಾಗಿದೆ. ಭೂಕಂಪನದಿಂದಾಗಿ 7 ಸಾವಿರ ಜನರಿಗೆ ಗಾಯಗಳಾಗಿದ್ದು ಸಾವಿರಾರು ಬಹುಮಹಡಿ ಕಟ್ಟಡಗಳು ನೆಲಸಮವಾಗಿವೆ. ಸಾಕಷ್ಟು ಜನರು ನಿರಾಶ್ರಿತರಾಗಿದ್ದಾರೆ. ಟರ್ಕಿ ಮತ್ತು ಸಿರಿಯಾ ಭೂಕಂಪನದಲ್ಲಿ ಮೃತಪಟ್ಟವರಿಗೆ ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ. ಈ ನಡುವೆ ಟರ್ಕಿಗೆ ಭಾರತ ನೆರವಿನ ಹಸ್ತ ಚಾಚಿದ್ದು ಪರಿಹಾರ ಸಾಮಾಗ್ರಿ ಪೂರೈಸಿದೆ ಎನ್ನಲಾಗಿದೆ. 2020 ರ ಜನವರಿಯಲ್ಲಿ ಮತ್ತೊಂದು ದೊಡ್ಡ ಭೂಕಂಪದಿಂದ ಟರ್ಕಿಯು ಅಪ್ಪಳಿಸಿತ್ತು, ಇದು 6.7 ರ ತೀವ್ರತೆಯು ದೇಶದ ಪೂರ್ವ ಭಾಗದಲ್ಲಿ ಗಮನಾರ್ಹ ಹಾನಿಯನ್ನುಂಟುಮಾಡಿತು. 1999 ರಲ್ಲಿ, ಇಸ್ತಾನ್‌ಬುಲ್ ಬಳಿ 7.4 ತೀವ್ರತೆಯ ಭೂಕಂಪ ಸಂಭವಿಸಿತು ಮತ್ತು ಅಂದಾಜು 18,000 ಜನರು ಸಾವನ್ನಪ್ಪಿದರು. : – - - 4 –-