ಜಿ-20 ಶೃಂಗಸಭೆ ಹಿನ್ನೆಲೆ: ತಾಜ್ ವೆಸ್ಟೆಂಡ್ ಹೋಟೆಲ್ ಸುತ್ತಮುತ್ತಾ ನೋ ಫ‍್ಲೈ ಜೋನ್ ಬೆಂಗಳೂರು,ಫೆಬ್ರವರಿ,2,2023(..):ಬೆಂಗಳೂರಿನಲ್ಲಿ ಜಿ-20 ಶೃಂಗಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ತಾಜ್ ವೆಸ್ಟೆಂಡ್ ಹೋಟೆಲ್ ನಲ್ಲಿ ಗಣ್ಯರು ಉಳಿದುಕೊಳ್ಳಲಿದ್ದು ಹೀಗಾಗಿ ಹೋಟೆಲ್ ಸುತ್ತಮುತ್ತಾ ನೋ ಫ್ಲೈಜೋನ್ ಘೋಷಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಆದೇಶಿಸಿದ್ದಾರೆ. ಫೆಬ್ರವರಿ 5 ರಿಂದ ಫೆಬ್ರವರಿ 11ರವರೆಗೆ ತಾಜ್ ವೆಸ್ಟ್ ಎಂಡ್ ಹೋಟೆಲ್ ನ ಸುತ್ತಮುತ್ತಾ 1 ಕಿ.ಮೀ ವ್ಯಾಪ್ತಿಯಲ್ಲಿ ನೋಫ್ಲೈಜೋನ್ ಘೋಷಿಸಲಾಗಿದ್ದು, ಯಾವುದೇ ಡ್ರೋಣ್, ಗ್ಲೈಡರ್ ಏರ್ ಕ್ರಾಫ್ಟ್ ಹಾರಾಡುವಂತಿಲ್ಲ ಎಂದು ಸೂಚನೆ ನೀಡಿದ್ದಾರೆ. ಹಾಗೆಯೇ ಬೆಂಗಳೂರು ಪೊಲೀಸರಿಂದ ಭಾರಿ ಭಧ್ರತೆ ವಹಿಸಲಾಗಿದ್ದು ತಾಜ್ ವೆಸ್ಟ್ ಎಂಡ್ ಹೋಟೆಲ್ ಸುತ್ತಮುತ್ತಾ 144 ಸೆಕ್ಷನ್ ಜಾರಿಗೊಳಿಸಲಾಗಿದೆ. : -20 –- – - –