ರಮೇಶ್ ಜಾರಕಿಹೊಳಿ-ಡಿಕೆಶಿ ನಡುವೆ ಸಿಡಿ ಫೈಟ್: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್. ಬೆಂಗಳೂರು, ಫೆಬ್ರವರಿ,2,2023(..):ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಡುವಿನ ಸಿಡಿ ಫೈಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ನಮಗೆ ಬೇಕಾಗಿರೋದು ನಮ್ಮ ನಾಡಿನ ಜನರ ಬದುಕು. ರೈತರು ಯುವಕರ ಸಮಸ್ಯೆ ಹೇಗೆ ಬಗೆಹರಿಸಬೇಕೆಂಬುದು ನನ್ನ ಚಿಂತೆ. ಅದರೆ ಇವರೆಲ್ಲಾ ಸಿಡಿ ವಿಚಾರ ಇಟ್ಟುಕೊಂಡು ಹೊರಟಿದ್ದಾರೆ. ನಾನು ಜನರ ಪರ ಧ್ವನಿ ಎತ್ತಿ ಹೋರಾಟ ಮಾಡುತ್ತೇನೆ. ಈ ಸಮಯದಲ್ಲಿ ಇದು ಸರಿನಾ ಅನ್ನೋದು ಜನರೇ ತೀರ್ಮಾನ ಮಾಡಲಿ ಎಂದರು. : - – - - -