ನಟ ಸುದೀಪ್ ಕಾಂಗ್ರೆಸ್ ಗೆ ಬಂದರೆ ಸ್ವಾಗತ- ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ. ಬೆಳಗಾವಿ,ಫೆಬ್ರವರಿ,3,2023(..):ನಟ ಕಿಚ್ಚ ಸುದೀಪ್ ಅವರನ್ನ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಭೇಟಿ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ ಬೆನ್ನಲ್ಲೆ ಇದೀಗ ಕಾಂಗ್ರೆಸ್ ಪಕ್ಷಕ್ಕೆ ನಟ ಸುದೀಪ್ ಬಂದರೆ ಸ್ವಾಗತ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಸತೀಶ್ ಜಾರಕಿಹೊಳಿ, ಪಕ್ಷದ ಸಿದ್ದಾಂತ ಒಪ್ಪಿ ಬರೋದು ನಟ ಸುದೀಪ್ ಅವರಿಗೆ ಬಿಟ್ಟಿದ್ದು. ಪಕ್ಷಕ್ಕೆ ಬಂದ್ರೆ ಪ್ರಚಾರದಲ್ಲಿ ತೊಡಗಿಕೊಳ್ಳಬಹುದು. ಸಿನಿಮಾ ನಟರು ರಾಜಕೀಯಕ್ಕೆ ಬರಲು ಯೋಚನೆ ಮಾಡುತ್ತಾರೆ. ಆದರೆ ಸುದೀಪ್ ಪಕ್ಷಕ್ಕೆ ಬಂದರೇ ಸ್ವಾಗತ ಎಂದರು. ನಾನು ಸುದೀಪ್ ಭೇಟಿಯಾಗಿಲ್ಲ. ಮಾತುಕತೆ ನಡೆಸಿಲ್ಲ. ನಮ್ಮಲ್ಲಿ ನಟರು ರಾಜಕೀಯಕ್ಕೆ ಬರಲು ಸ್ವಲ್ಪ ಯೋಚಿಸುತ್ತಾರೆ ಆಂಧ್ರ ಪ್ರದೇಶ, ತಮಿಳುನಾಡು ತೆಲಂಗಾಣದಲ್ಲಂತೆ ನಮ್ಮಲ್ಲಿ ಆಗುವುದಿಲ್ಲ. ನಮ್ಮ ಪಕ್ಷ ಸ್ಟಾರ್ ಗಳನ್ನ ಕರೆತಂದು ಯಾವತ್ತೂ ಪ್ರಚಾರದಲ್ಲಿ ತೊಡಗಿಲ್ಲ ಎಂದರು. : – - - – - .