ಲೋಪದೋಷಗಳು ಹೆಚ್ಚಾದ ಹಿನ್ನೆಲೆ: ಪ್ರಾದೇಶಿಕ ನಿರ್ದೇಶಕರುಗಳಿಗೆ ಈ ಮಾರ್ಗಸೂಚಿಗಳ ಪಾಲನೆ ಕಡ್ಡಾಯಗೊಳಿಸಿದ ‘’ ಮೈಸೂರು,ಜನವರಿ,31,2023(..):ಪ್ರಾದೇಶಿಕ ಕೇಂದ್ರಗಳ ಆಡಳಿತ ನಿರ್ವಹಣೆ ಸಂಬಂಧ ಲೋಪದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಪ್ರಾದೇಶಿಕ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾತ್ಕಾಲಿಕ, ಕಾಲಿಕ ವೇತನಶ್ರೇಣಿ ಪ್ರಾದೇಶಿಕ ನಿರ್ದೇಶಕರುಗಳಿಗೆ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾರ್ಗಸೂಚಿ ಕಡ್ಡಾಯಗೊಳಿಸಿ ಆದೇಶಿಸಿದೆ. ಈ ಕುರಿತು ಆದೇಶಹೊರಡಿಸಿರುವ ಕೆಎಸ್ ಒಯು ಕುಲಸಚಿವರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಪ್ರಾದೇಶಿಕ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾತ್ಕಾಲಿಕ, ಕಾಲಿಕ ವೇತನಶ್ರೇಣಿ ಪ್ರಾದೇಶಿಕ ನಿರ್ದೇಶಕರುಗಳ ಗಮನಕ್ಕೆ ತರುವುದೇನೆಂದರೆ, ಇತ್ತೀಚೆಗೆ ಕೆಲವು ಪ್ರಾದೇಶಿಕ ನಿರ್ದೇಶಕರುಗಳು ತಮ್ಮ ವೈಯಕ್ತಿಕ ಕಾರಣಗಳಿಗಾಗಿ ನೀಡುವ ಮನವಿ/ದೂರುಗಳಿಗೆ ಪ್ರಾದೇಶಿಕ ಕೇಂದ್ರದ ಲೆಟರ್ ಹೆಡ್ ಬಳಸುತ್ತಿರುವುದು, ಪತ್ರಗಳಲ್ಲಿ ಮನವಿ/ದೂರುಗಳನ್ನು ಸಲ್ಲಿಸುತ್ತಿರುವುದು, ಕಚೇರಿ ವೇಳೆಯನ್ನು ಪಾಲಿಸದೇ ಇರುವುದು, ಪೂರ್ವಾನುಮತಿ ಪಡೆಯದೆ ರಜೆ ಪಡೆಯುವುದು/ಕೇಂದ್ರ ಕಚೇರಿಗೆ ಭೇಟಿ ನೀಡುವುದು ಇಂತಹ ಲೋಪದೋಷಗಳು ಹೆಚ್ಚಾಗಿ ಕಂಡು ಬರುತ್ತಿದೆ. ಇದು ಕಾರ್ಯ ವಿಧಾನಕ್ಕೆ ವಿರುದ್ಧವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಕೆಳಕಂಡ ಕಚೇರಿ – ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಬೇಕು ಎಂದು ಪ್ರಾದೇಶಕಿ ನಿರ್ದೇಶಕರುಗಳಿಗೆ ಸೂಚಿಸಿದೆ. ಈ ಮೇಲಿನ ಎಲ್ಲಾ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಸೂಚಿಸಿದ್ದು, ತಪ್ಪಿದ್ದಲ್ಲಿ ನಿಯಮಾನುಸಾರ ತಮ್ಮ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾದೇಶಿಕ ನಿರ್ದೇಶಕರುಗಳಿಗೆ ಕುಲಸಚಿವರು ಎಚ್ಚರಿಕೆ ನೀಡಿದ್ದಾರೆ. : ‘- - – -