ಹಿರಿಯ ಹಾಸ್ಯ ನಟ ಮಂದೀಪ್ ರೈ ನಿಧನ ಬೆಂಗಳೂರು, ಜನವರಿ 29, 2023 (..): ಹಿರಿಯ ಹಾಸ್ಯ ನಟ ಮಂದೀಪ್ ರೈ (73) ಹೃದಯಾಘಾತದಿಂದ ನಿಧನರಾಗಿದ್ದಾರೆ. ಬೆಂಗಳೂರಿನ ಭೈರಸಂಧ್ರದ ನಿವಾಸದಲ್ಲಿ ಮಧ್ಯರಾತ್ರಿ 1.45 ರ ಸುಮಾರಿಗೆ ಮಂದೀಪ್ ರೈ ನಿಧನರಾಗಿದ್ದಾರೆ. ಇಂದು ಸಂಜೆ ಮಂದೀಪ್ ರಾಯ್ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಮಂದೀಪ್ ರಾಯ್ ಅವರು ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಮಿಂಚಿನ ಓಟ, ಬೆಂಕಿಯ ಬಲೆ, ಏಳು ಸುತ್ತಿನ ಕೋಟೆ, ಆಕಸ್ಮಿಕ, ರೇ, ಆಪ್ತ ರಕ್ಷಕ, ಅಮೃತಧಾರೆ, ಕುರಿಗಳು ಸಾರ್ ಕುರಿಗಳು ಸೇರಿದಂತೆ 500 ಕ್ಕೂ ಹೆಚ್ಚು ಸಿನಿಮಗಳಲ್ಲಿ ನಟಿಸಿದ್ದಾರೆ.