ಸಚಿವ ಸುಧಾಕರ್ ಪೆದ್ಧ: ಸಿಎಜಿ ರಿಪೋರ್ಟ್ ಓದೋಕೆ, ಅರ್ಥ ಮಾಡಿಕೊಳ್ಳೋಕೆ ಬರೋದಿಲ್ಲ- ಮಾಜಿ ಸಿಎಂ ಸಿದ್ಧರಾಮಯ್ಯ ವ್ಯಂಗ್ಯ. ಬೆಂಗಳೂರು,ಜನವರಿ,25,2023(..):ಸಚಿವ ಸುಧಾಕರ್ ಒಬ್ಬ ಪೆದ್ದ. ಸಿಎಜಿ ರಿಪೋರ್ಟ್ ಓದೋಕೆ, ಅರ್ಥ ಮಾಡಿಕೊಳ್ಳೋಕೆ ಬರೋದಿಲ್ಲ. ನೆನ್ನೆ ಮೊನ್ನೆ ಬಿಜೆಪಿಗೆ ಹೋದ ಈ ಮನುಷ್ಯ ಅರ್ಜೆಂಟಾಗಿ ಆರ್ಎಸ್ಎಸ್ ನವರ ಪ್ರೀತಿ ಗಳಿಸಲು ಆರ್ ಎಸ್ಎಸ್ ನವರಿಗಿಂತ, ಮೂಲ ಬಿಜೆಪಿಯವರಿಗಿಂತ ಭಯಾನಕ ಸುಳ್ಳು ಹೇಳುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದರು. ತಮ್ಮ ವಿರುದ್ಧ ಮಾಡಿರುವ 35 ಸಾವಿರ ಕೋಟಿ ಭ್ರಷ್ಟಾಚಾರದ ಆರೋಪಕ್ಕೆ ಸಮಗ್ರ ದಾಖಲೆಗಳ ಸಮೇತ ಪತ್ರಿಕಾಗೋಷ್ಠಿ ನಡೆಸಿದ ಸಿದ್ದರಾಮಯ್ಯ, ಸಚಿವ ಸುಧಾಕರ್ ಆರೋಪಕ್ಕೂ-ಸಿಎಜಿ ವರದಿಯಲ್ಲಿ ಇರುವುದಕ್ಕೂ ಒಂದಕ್ಕೊಂದು ಸಂಬಧವೇ ಇಲ್ಲ ಎಂದು ಎಳೆಎಳೆಯಾಗಿ ಬಿಚ್ಚಿಟ್ಟರು. ಎಜಿಯವರು ಪ್ರತಿ ವರ್ಷ ರಾಜ್ಯದ ಹಣಕಾಸು ಸ್ಥಿತಿಗತಿಯ ಕುರಿತು ವರದಿಯನ್ನು ಸಿದ್ಧಪಡಿಸಿ ಕೊಡುತ್ತಾರೆ. 2016-17 ಸಾಲಿನ ವರದಿಯನ್ನು 2018 ರಲ್ಲಿ ಕೊಟ್ಟಿದ್ದಾರೆ. ಅದರಲ್ಲಿ ಪುಟ ಸಂಖ್ಯೆ ರಲ್ಲಿ ಹೀಗೆ ಹೇಳಿದ್ದಾರೆ. “ 19 ” ಎಂದು ಹೇಳಿದ್ದಾರೆ. ಈ ಹೇಳಿಕೆಯನ್ನು ಆಧರಿಸಿ “2016-17ನೆ ಸಾಲಿನ ಆರ್ಥಿಕ ವರ್ಷದ ಆಯವ್ಯಯದಲ್ಲಿ 1,86,052 ಕೋಟಿ ರೂ.ಗಳಲ್ಲಿ 19% [35 ಸಾವಿರ ಕೋಟಿ} ತಾಳೆಯಾಗುತ್ತಿಲ್ಲವೆಂದು ಸಿಎಜಿ ತನ್ನ ವರದಿಯಲ್ಲಿ ಉಲ್ಲೇಖಿಸಿದೆ. ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ನಡೆಸಿರುವ ಅವ್ಯವಹಾರ, ಭ್ರಷ್ಟಾಚಾರಗಳನ್ನು ದೃಢೀಕರಿಸಿದಂತಾಗುತ್ತದೆ”ಎಂದು ಪೆದ್ದ ಸುಧಾಕರ್ ಆರೋಪಿಸಿದ್ದಾರೆ. ಸುಧಾಕರ್ ಎಂಬಿಬಿಎಸ್ ಡಾಕ್ಟರ್ ಅಂತ ಅಂದುಕೊಂಡಿದ್ದೀನಿ ನಾನು. ಅವರಿಗೆ ಎಜಿ ರಿಪೋರ್ಟ್ ಅರ್ಥ ಆಗಲ್ಲ. ರೀಕನ್ಸಿಲಿಯೇಷನ್ ರಿಪೋರ್ಟ್ ಅಂತ ಎಜಿ ರಿಪೋರ್ಟ್ ಗೆ ಕರಿತಾರೆ. ಅನುದಾನ ಖರ್ಚು ತಾಳೆ ಆಗ್ತಿದಾವಾ ಇಲ್ವಾ ನೋಡೋದು ಎಜಿ ರಿಪೋರ್ಟ್. ರೀಕನ್ಸಿಲಿಯೇಷನ್ ರಿಪೋರ್ಟ್ ನಲ್ಲಿ ಎಲ್ಲ ಕಾಲದಲ್ಲೂ ಕೂಡ ಕೆಲವು ಪರ್ಸೆಂಟೇಜ್ ತಾಳೆ ಆಗೋದಿಲ್ಲ. 2008-09 ರಲ್ಲಿ ತಾಳೆಯಾಗದ ಅನುದಾನ 49% ಇತ್ತು ಯಾವ ಸರ್ಕಾರ ಇತ್ತು ಗೊತ್ತೇನಪ್ಪಾ ಸುಧಾಕರ? 2015-16 ರಲ್ಲಿ 16% ಮಾತ್ರ ತಾಳೆಯಾಗದ ಅನುದಾನ ಆಗಿತ್ತು. ಆಗ ನಮ್ಮ ಸರ್ಕಾರ ಇತ್ತು. ಈ ಮೂರ್ಖರಿಗೆ ಇದು ಅರ್ಥ ಆಗಬೇಕಾ ಬೇಡವಾ? ಬಿಜೆಪಿಯಲ್ಲಿ ಅತಿ ಹೆಚ್ಚು ಸುಳ್ಳು ಹೇಳಿದರೆ ಅತಿ ದೊಡ್ಡ ಲೀಡರ್ ಆಗಬಹುದು ಎನ್ನುವುದು ಸುಧಾಕರ್ ಗೆ ಬಹಳ ಬೇಗ ಅರ್ಥ ಆಗಿದೆ ಎಂದು ಸಿದ್ಧರಾಮಯ್ಯ ಲೇವಡಿ ಮಾಡಿದರು. ನಾನು ಎಜಿಯವರಿಂದ ಮಾಹಿತಿ ತರಿಸಿಕೊಂಡು ಮತ್ತೆ ಓದಿದೆ. ಈ ರೀಕನ್ಸಿಲೆಶನ್ ವಿಚಾರದಲ್ಲಿ ನಮ್ಮ ಸರ್ಕಾರವೆ ಸಾಕಷ್ಟು ಸುಧಾರಣೆಗಳನ್ನು ಸಾಧಿಸಿದೆ ಎಂದು ವರದಿ ಹೇಳುತ್ತಿದೆ. ಇದರ ಪ್ರಕಾರ ಬಿಜೆಪಿ ಸರ್ಕಾರದಲ್ಲಿ ಶೇ.50 ರಷ್ಟು ರೀಕನ್ಸೆಲ್ ಆಗುತ್ತಿರಲಿಲ್ಲ. ಆದರೆ ನಾವು ತೆಗೆದುಕೊಂಡ ಕ್ರಮಗಳಿಂದ ಈ ಪ್ರಮಾಣ ಶೇ. 16, 18 ರಷ್ಟು ಮಾತ್ರ ಬಾಕಿ ಉಳಿಯುತ್ತಿತ್ತು. ಮೆಚ್ಚುಗೆ ಸೂಚಿಸಬೇಕಾದ್ದಕ್ಕೆ ಭ್ರಷ್ಟಾಚಾರ ಅಂತ ಕರೆದಿದೆ ಈ ಪೆದ್ದು . ಭಷ್ಟಾಚಾರ ಎಂದರೆ ಯಾವುದು ಗೊತ್ತಾ ಸುಧಾಕರ್? ಕೊರೋನಾ ಸಮಯದಲ್ಲಿ ಹೆಣಗಳ ವಿಚಾರದಲ್ಲೂ ಲಂಚ ಹೊಡೆಯುವುದು ಭ್ರಷ್ಟಾಚಾರ. 2020-21ರಲ್ಲೆ ಸುಮಾರು 3000 ಕೋಟಿ ರೂಗಳಷ್ಟು ಕೊರೋನ ಭ್ರಷ್ಟಾಚಾರ ನಡೆದಿದೆಯೆಂದು ಆಗಿನ ಪಬ್ಲಿಕ್ ಅಕೌಂಟ್ಸ್ ಕಮಿಟಿಯ ಅಧ್ಯಕ್ಷರಾದ ಎಚ್ ಕೆ ಪಾಟೀಲರು ಸ್ಪೀಕರ್ ಗೆ ವರದಿ ಕೊಟ್ಟಿದ್ದಾರೆ. ಇದು ಭ್ರಷ್ಟಾಚಾರ. ಆದರೆ ಈ ಸ್ಪೀಕರ್ ಮಹಾಶಯರು ಎಚ್.ಕೆ.ಪಾಟೀಲರು ಕೊಟ್ಟ ವರದಿಯನ್ನು ಸದನದಲ್ಲಿ ಮಂಡಿಸದೆ ತಾನು ವಿಧಾನಸಭಾಧ್ಯಕ್ಷ್ಷ ಎನ್ನುವುದನ್ನು ಮರೆತು ಆರೆಸ್ಸೆಸ್ಸಿನ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಆರೋಪಿಸಿದರು. 2021-22 ರ ಕೊರೋನಾದಲ್ಲೂ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಈ ಕುರಿತು ಆಡಿಟ್ ತನಿಖೆ ಮಾಡಲು ಪಬ್ಲಿಕ್ ಅಕೌಂಟ್ಸ್ ಕಮಿಟಿಯು ಎಜಿಯವರಿಗೆ ಪತ್ರ ಬರೆದು ಕೋರಿದ್ದರು. ಆದರೆ ಎಜಿಯವರು ಆಡಳಿತ ಇಲಾಖೆಯು ಪತ್ರ ಬರೆಯಬೇಕು ಎಂದು ತಿಳಿಸಿದ್ದರು. ಆದರೆ ಆಡಳಿತ ಇಲಾಖೆಯಾದ ಆರೋಗ್ಯ ಇಲಾಖೆ ಮತ್ತು ಮೆಡಿಕಲ್ ಎಜುಕೇಶನ್ ಇಲಾಖೆ ಆಡಿಟ್ ತನಿಖೆ ಮಾಡಲು ಎಜಿಯವರಿಗೆ ಪರ್ಮಿಶನ್ ಕೊಡಲೇ ಇಲ್ಲ. ಸುಧಾಕರ್ ಭ್ರಷ್ಟ ಅಲ್ಲದಿದ್ದರೆ ಆಡಿಟ್ ತನಿಖೆ ಮಾಡಲು ಒಪ್ಪಿಗೆ ಕೊಡಬೇಕಾಗಿತ್ತಲ್ಲ? ಆದರೆ ಯಾಕೆ ಅವಕಾಶ ಕೊಡಲಿಲ್ಲ? ಎನ್ನುವುದಕ್ಕೆ ಸಚಿವ ಸುಧಾಕರ್ ಉತ್ತರ ಕೊಡಬೇಕು. ಇವರು ಶತಮೂರ್ಖರು ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಇದೆ. “ಕೃಷಿ, ತೋಟಗಾರಿಕೆ, ಗೃಹ ಮತ್ತು ಸಾರಿಗೆ, ಲೋಕೋಪಯೋಗಿ ಇಲಾಖೆಗಳಲ್ಲಿ 1085 ಕೋಟಿ ಅವ್ಯವಹಾರವಾಗಿದೆ” ಎಂದು ಆರೋಪಿಸಿದ್ದಾರೆ. ಆದರೆ, ಎಜಿಯವರು ಇದನ್ನು ಅವ್ಯವಹಾರ ಎಂದಾಗಲಿ, ಭ್ರಷ್ಟಾಚಾರ ಎಂದಾಗಲಿ ಹೇಳಿಲ್ಲ. ಬಜೆಟ್ ನಲ್ಲಿ ಹೇಳಿದ್ದಕ್ಕಿಂತ ಹೆಚ್ಚು ಖರ್ಚಾಗಿದೆ ಎಂದಷ್ಟೆ ಎಜಿ ವರದಿ ಹೇಳುತ್ತಿದೆ. “ಇದಕ್ಕೆ ಕಾರಣವನ್ನೂ ಹೇಳಿದ್ದಾರೆ, “ ’ 1235 2016-17” ಎಂದಿದ್ದಾರೆ. ಇದು ಭ್ರಷ್ಟಾಚಾರನಾ? ಎಂದು ಪ್ರಶ್ನಿಸಿದರು. ಬಿಜೆಪಿಯ ಆಲಿಬಾಬಾ ಮತ್ತು ಚಾಲಿಸ್ ಚೋರ್ ಗಳ ದಂಡನಾಯಕ ಆಗುವ ಹಠಕ್ಕೆ ಬಿದ್ದ ಸುಧಾಕರ್ ರನ್ನು ಸಿಎಂ ಬೊಮ್ಮಾಯಿ ಬಫೂನ್ ಮಾಡುತ್ತಿದ್ದಾರೆ. ಬೇಕಂತಲೇ ಸುಧಾಕರ್ ಬಾಯಲ್ಲಿ ಸುಳ್ಲು ಹೇಳಿಸುತ್ತಿದ್ದಾರೆ. ಸುಧಾಕರ್ ಬಫೂನ್ ಆಗಿದ್ದಾರೆ. ಸುಧಾಕರ್ ನಮ್ಮ ಪಾರ್ಟಿಯಿಂದಲೇ ರಾಜಕೀಯ ಜೀವನ ಪಡೆದರು. ದುಡ್ಡಿನ ಆಸೆಗೆ ಬಿದ್ದು ಆಪರೇಷನ್ ಕಮಲಕ್ಕೆ ಮಾರಿಕೊಂಡರು. ಕಾಂಗ್ರೆಸ್ ನಿಂದ ಸುಧಾಕರ್ ಗೆ ಟಿಕೆಟ್ ಕೊಡುವಾಗ ಮೋಯ್ಲಿ ಅವರು, “ಅವನೊಬ್ಬ ಬಿಗ್ ಫ್ರಾಡ್. ಅವನಿಗೆ ಟಿಕೆಟ್ ಕೊಡಬಾರದು” ಎಂದು ಹೇಳಿದ್ದರು. ಅವತ್ತು ಚುನಾವಣಾ ಸಮಿತಿಯಲ್ಲಿ ಮೊಯ್ಲಿ, ಪರಮೇಶ್ವರ್, ಮಿಸ್ತ್ರಿ ಇದ್ದರು. ಈಗ ತಾನೊಬ್ಬ ನಿಜಕ್ಕೂ ಫ್ರಾಡ್ ಎಂದು ತನ್ನ ಕ್ಷೇತ್ರದ ಮತದಾರರ ಎದುರು ಸುಧಾಕರ್ ತಮ್ಮನ್ನು ತಾವು ಪ್ರೂವ್ ಮಾಡಿಕೊಂಡಿದ್ದಾರೆ. ಕ್ಷೇತ್ರದ ಜನಕ್ಕೂ ಸುಧಾಕರ್ ಫ್ರಾಡ್ ಎನ್ನುವುದು ಮತ್ತು ಆರ್ ಎಸ್ಎಸ್ ಮೆಚ್ಚಿಸಲು ವಿಪರೀತ ಸುಳ್ಳುಗಾರ ಆಗಿದ್ದಾರೆ ಎನ್ನುವುದು ಅರ್ಥ ಆಗಿದೆ. ಆರ್ ಎಸ್ಎಸ್ ನವರು ಕೂಡ, “ಎಷ್ಟಾದರೂ ಭ್ರಷ್ಟಾಚಾರ ಮಾಡಿದ್ರೂ ಪರ್ವಾಗಿಲ್ಲ. ಸಮಯಕ್ಕೆ ಸರಿಯಾಗಿ ಸುಳ್ಳು ಹೇಳಿದರೆ ಸಾಕು” ಎಂದು ಕೋರೊನಾ ಕಾಲದ ಎಲ್ಲಾ ಭ್ರಷ್ಟಾಚಾರಕ್ಕೂ ಬೇಷರತ್ ಬೆಂಬಲ ನೀಡುವ ರೀತಿಯಲ್ಲಿ ಬಾಯಿ ಮುಚ್ಚಿಕೊಂಡು ಕುಳಿತಿದ್ದಾರೆ. ನನ್ನ ವಿರುದ್ಧ ಸುಳ್ಳು ಆರೋಪ ಮಾಡುವುದಕ್ಕೆ ಸುಧಾಕರ್ ರನ್ನು ಮುಂದೆ ಬಿಟ್ಟಿದ್ದಾರೆ. ಅವರ ಕ್ಷೇತ್ರದ ಜನರ ಆಶಯದಂತೆ ಸುಧಾಕರ್ ವಿರುದ್ಧ ಒಳ್ಳೆ ಅಭ್ಯರ್ಥಿ ಹಾಕಿ ಅವರನ್ನು ಚುನಾವಣೆಯಲ್ಲಿ ಸೋಲಿಸುತ್ತೇವೆ ಎಂದು ಶಪಥ ಮಾಡಿದರು. ಅವ್ಯವಹಾವಾಗಿಲ್ಲ ಎಂಬ ವರದಿ ಇದೆ: ಈ ಸುಧಾಕರ್ ಬೆಂಗಳೂರಿನ ವೈಟ್ ಟಾಪಿಂಗ್ ಯೋಜನೆಯಲ್ಲಿ ಅವ್ಯವಹಾರ ನಡೆದಿತ್ತು ಎಂದಿದ್ದಾರೆ. ಆದರೆ 2019 ರಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪನವರು ಕ್ಯಾಪ್ಟನ್ ದೊಡ್ಡಿಹಾಳ್ ರಿಟೈರ್ಡ್ ಚೀಫ್ ಎಂಜಿನಿಯರ್ ಕೇಂದ್ರ ಸರ್ಕಾರದ ಕ್ವಾಲಿಟಿ ಮಾನಿಟರ್ ಸೆಲ್ ಇವರ ಅಧ್ಯಕ್ಷತೆಯಲ್ಲಿ 4 ಜನರ ತಂಡವನ್ನು ನೇಮಿಸಿದ್ದರು. ಈ ಸಮಿತಿಯಲ್ಲಿ ಎಚ್ ಎಸ್ ಜಗದೀಶ್ , ಬಸವರಾಜ್ ಶಿವಾನ್ಷಿಮಠ, ನಾಗೇಂದ್ರ ಇದ್ದರು. ಈ ಸಮಿತಿಯು ಟೆಂಡರ್ ಶ್ಯೂರ್ ಮತ್ತು ವೈಟ್ ಟಾಪಿಂಗ್ ಕಾಮಗಾರಿ ಮುಂತಾದವುಗಳ ಕುರಿತು ತನಿಖೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ. ಸದರಿ ವರದಿಯಲ್ಲಿ ಯಾವುದೆ ಅವ್ಯವಹಾರ ಆಗಿಲ್ಲ ಎಂದು ವರದಿ ಕೊಟ್ಟಿರುವುದನ್ನು ಯಡಿಯೂರಪ್ಪನವರ ಸರ್ಕಾರವು ಅಂಗೀಕರಿಸಿದೆ. ಇಷ್ಟಿದ್ದರೂ ಸಹ ಬಿಜೆಪಿ ಸರ್ಕಾರದಲ್ಲಿ ಮಂತ್ರಿಯಾಗಿರುವ ಡಾ. ಸುಧಾಕರ್ ಈ ವಿಚಾರ ತಿಳಿದುಕೊಳ್ಳದೆ ಮಣ್ಣು ತಿನ್ನುತ್ತಿದ್ದರಾ? ಇಲ್ಲ ಏನು ತಿನ್ನುತ್ತಿದ್ದರು? ತಮ್ಮದೆ ಸರ್ಕಾರವೆ ಅವ್ಯವಹಾರ ನಡೆದಿಲ್ಲ ಎಂದು ಹೇಳಿದ್ದರೂ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿದ್ದಾರೆ ಎಂದರೆ ಇವರು ಎಂಥಾ ದುಷ್ಟ ಮನಸ್ಥಿತಿಯವರು ಎಂಬುದನ್ನು ಜನ ಅರ್ಥಮಾಡಿಕೊಳ್ಳಬೇಕು ಎಂದರು. ಆಪರೇಷನ್ ಕಮಲಕ್ಕೆ ಜೆಡಿಎಸ್ ಕಾರಣ: ಜೆಡಿಎಸ್ ಅಧಿಕಾರ ಕೊಟ್ಟಿದ್ರೆ ಬಿಜೆಪಿ ಅಧಿಕಾರಕ್ಕೆ ಬರ್ತಾ ಇರಲಿಲ್ಲ. ಅವರಿಗೆ 20 ತಿಂಗಳ ಅಧಿಕಾರಕ್ಕೆ ಕೊಟ್ಟಿದ್ರೆ ಮುಗಿತ್ತಿತ್ತು ಇವತ್ತು ಆಪರೇಷನ್ ಕಮಲ ಮಾಡಲು ಜೆಡಿಎಸ್ ಕಾರಣ. ಆಪರೇಷನ್ ಕಮಲ ಸಂಸ್ಕೃತಿ ತಂದಿದ್ದು ಬಿಜೆಪಿ.ಬಿಜೆಪಿಗೆ ಯಾವತ್ತು ಬಹುಮತ ಬಂದಿಲ್ಲ. ಹೀಗಾಗಿ ಮತ್ತೆ ಆಪರೇಷನ್ ಬಗ್ಗೆ ರಮೇಶ್ ಜಾರಕಿಹೋಳಿ ಮಾತನಾಡುತ್ತಿದ್ದಾರೆ ಎಂದು ಸಿದ್ಧರಾಮಯ್ಯ ಕಿಡಿಕಾರಿದರು. : –- - - - -