ಜಲಾಶಯವಲ್ಲ ರಸ್ತೆ ದುರಸ್ತಿಗೂ ರಾಜ್ಯ ಸರ್ಕಾರದ ಬಳಿ ದುಡ್ಡಿಲ್ಲ – ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹುಬ್ಬಳ್ಳಿ,ಆಗಸ್ಟ್,12,2024 (..):ಕೊಪ್ಪಳ ಜಿಲ್ಲೆ ಮುನಿರಾಬಾದ್ ಬಳಿ ಇರುವ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್ ಕೊಚ್ಚಿ ಹೋಗಿರುವ ಕುರಿತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಜಲಾಶಯ ಖಾಲಿ ಇದ್ದಾಗ ಸರ್ಕಾರ ಅದರ ನಿರ್ವಹಣೆ ಮಾಡಬೇಕಿತ್ತು. ಈ ಕುರಿತು ನಿನ್ನೆ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ರಾಜ್ಯ ಸರ್ಕಾರ ಕೇಂದ್ರ ಸಲಹೆ ಧಿಕ್ಕರಿಸಿದೆ ಎಂದು ಹೇಳಿದ್ದಾರೆ. ಇನ್ನೂದರೂ ಡ್ಯಾಂ ನಿರ್ವಹಣೆ ಬಗ್ಗೆ ಗಮನಹರಿಸಲಿ ಎಂದರು. ನಾನು ಮಂತ್ರಿಯಾಗಿ ಕೆಸರೆರಚಾಟಕ್ಕೆ ಬೀಳಲ್ಲ. ಕೂಡಲೇ ಸರ್ಕಾರ ತುಂಗಭದ್ರಾ ಜಲಾಶಯದ ಗೇಟ್ ಸರಿಪಡಿಸಲು ಮುಂದಾಗಬೇಕು. ಜಲಾಶಯ ಅಲ್ಲ, ರಾಜ್ಯ ಸರ್ಕಾರದ ಬಳಿ ರಸ್ತೆ ದುರಸ್ತಿಗೂ ದುಡ್ಡಿಲ್ಲ. ಸರ್ಕಾರ ದಿವಾಳಿಯಾಗಿದೆ ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದರು. : , , ,