ತಾಲ್ಲೂಕು ಕಚೇರಿಯಲ್ಲೇ ಕುಡುಗೋಲಿನಿಂದ ಹಲ್ಲೆ ಮಾಡಿ ವ್ಯಕ್ತಿ ಹತ್ಯೆಗೆ ಯತ್ನ. ಮಂಡ್ಯ,ಜನವರಿ,24,2023(..):ತಾಲ್ಲೂಕು ಕಚೇರಿಯಲ್ಲೇ ಕುಡುಗೋಲಿನಿಂದ ಹಲ್ಲೆ ಮಾಡಿ ವ್ಯಕ್ತಿಯೊಬ್ಬರನ್ನ ಹತ್ಯೆ ಮಾಡಲು ಯತ್ನಿಸಿರುವ ಘಟನೆ ಮದ‍್ಧೂರಿನಲ್ಲಿ ನಡೆದಿದೆ. ಮದ್ಧೂರು ತಾಲ್ಲೂಕು ಕಚೇರಿಯಲ್ಲಿ ಈ ಘಟನೆ ನಡೆದಿದೆ. ಚೆನ್ನರಾಜ್ ಹಲ್ಲೆಗೊಳಗಾದ ವ್ಯಕ್ತಿ. ನಂದನ್ ಎಂಬಾತನೇ ಹಲ್ಲೆ ನಡೆಸಿರುವುದು. ಚೆನ್ನರಾಜ್ ಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಮೀನು ವ್ಯಾಜ್ಯ ಹಿನ್ನೆಲೆ ಚೆನ್ನರಾಜ್ ಮತ್ತು ನಂದನ್ ತಾಲ್ಲೂಕು ಕಚೇರಿ ಬಂದಿದ್ದರು. ಈ ನಡುವೆ ಚೆನ್ನರಾಜ್ ಪರ ತೀರ್ಪು ಬರುತ್ತಿದ್ದಂತೆ ಕುಪಿತಗೊಂಡಿದ್ದ ನಂದನ್ ಹಲ್ಲೆ ನಡೆಸಿದ್ದಾನೆ. ಚೆನ್ನರಾಜ್ ಗೆ ಖಾರದ ಪುಡಿ ಎರಚಿ ಕುಡುಗೋಲಿನಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. : –- - -