ಭದ್ರಾವತಿ ವಿಐಎಸ್ ಎಲ್ ಕಾರ್ಖಾನೆ ಮುಚ್ಚದಂತೆ ಆಗ್ರಹ: ಪ್ರಧಾನಿ ಮೋದಿಗೆ ಹೆಚ್.ಡಿ ದೇವೇಗೌಡರಿಂದ ಪತ್ರ. ಬೆಂಗಳೂರು,ಜನವರಿ,24,2023(..):ಭದ್ರಾವತಿಯ ವಿಐಎಸ್ ಎಲ್ ಕಾರ್ಖಾನೆ ಮುಚ್ಚದಂತೆ ಆಗ್ರಹಿಸಿ ಪ್ರಧಾನಿ ನರೇಂದ್ರ ಮೋದಿಗೆ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಪತ್ರ ಬರೆದಿದ್ದಾರೆ. ಈ ಕುರಿತು ಮೋದಿಗೆ ಪತ್ರ ಬರದಿರುವ ಹೆಚ್.ಡಿ ದೇವೇಗೌಡರು, ಭಧ್ರಾವತಿಯ ವಿಐಎಸ್ ಎಲ್ ಕಾರ್ಖಾನೆ ಮುಚ್ಚಬಾರದು. ಕಾರ್ಖಾನೆಯನ್ನ ಮರು ಆರಂಭ ಮಾಡಲು ಕ್ರಮ ಕೈಗೊಳ್ಳಬೇಕು. ಇದರಿಂದ 20 ಸಾವಿರ ಕುಟುಂಬ ಅವಲಂಭಿತರಾಗಿದ್ದು, ರಕ್ಷಣಾ ವಲಯ ನ್ಯೂಕ್ಲಿಯರ್, ರೈಲ್ವೆ ಮುಂತಾದ ವಿಭಾಗಕ್ಕೆ ಕಾರ್ಖಾನೆಯಿಂದ ಅನುಕೂಲವಾಗಲಿದೆ. ಈ ಹಿನ್ನೆಲೆಯಲ್ಲಿ ವಿಐಎಸ್ ಎಲ್ ಕಾರ್ಖಾನೆ ಮುಚ್ಚುವ ನಿರ್ಧಾರವನ್ನು ಕೈ ಬಿಡಬೇಕು ಎಂದು ಹೆಚ್.ಡಿ ದೇವೇಗೌಡರು ಮನವಿ ಮಾಡಿದ್ದಾರೆ. : - – - - -- .