ಪ್ರಧಾನಿ ಮೋದಿ ಜನಮನ್ನಣೆ ಗಳಿಸಿದ ನಾಯಕ: ಅವರಿಗೆ ಬೈದರೆ ಆಕಾಶಕ್ಕೆ ಉಗುಳಿದ ಹಾಗೆ- ಸಿಎಂ ಬೊಮ್ಮಾಯಿ. ಬೆಂಗಳೂರು,ಜನವರಿ,23,2023(..):ಪ್ರಧಾನಿ ನರೇಂದ್ರ ಮೋದಿ ಅವರನ್ನ ಹಿಟ್ಲರ್ ಗೆ ಹೋಲಿಸಿದ ಮಾಜಿ ಸಿಎಂ ಸಿದ್ಧರಾಮಯ್ಯ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದರು. ಈ ಕುರಿತು ಇಂದು ಮಾತನಾಡಿದ ಸಿಎಂ ಬೊಮ್ಮಾಯಿ, ಸಿದ್ಧರಾಮಯ್ಯ ಟೀಕೆಗಳನ್ನ ನಾನು ಸ್ವಾಗತ ಮಾಡುತ್ತೇನೆ. ಟೀಕೆಗಳನ್ನ ನಾನು ಮೆಟ್ಟಿಲುಗಳಾಗಿ ಮಾಡಿ ಯಶಸ್ಸು ಪಡೆಯುತ್ತೇನೆ. ಪ್ರಧಾನಿ ಮೋದಿ ಜನಮನ್ನಣೆ ಗಳಿಸಿದ ನಾಯಕ. ಮೋದಿ ಅವರಿಗೆ ಬೈದರೆ ಅಕಾಶಕ್ಕೆ ಉಗುಳಿದ ಹಾಗೆ ಆಗುತ್ತೆ. ಈ ಹಿಂದೆ ಮೋದಿಯವರನ್ನ ಸೋನಿಯಾ ಗಾಂಧಿ ಟೀಕೆ ಮಾಡಿದ್ರು. ಆಗ ಮೋದಿಗೆ ವೋಟ್ ಜಾಸ್ತಿಯಾಯಿತು. ಜನಮನ್ನಣೆ ಸಿಕ್ಕಿತು. ಕಾಂಗ್ರೆಸ್ ಏನೇ ಹೇಳಿದರೂ ಜನರು ನಮ್ಮ ಪರ ಇರುತ್ತಾರೆ ಎಂದು ಸಿಎಂ ಬೊಮ್ಮಾಯಿ ಟಾಂಗ್ ನೀಡಿದರು. : - – – - –