ನೌಕಾಪಡೆಗೆ ಮತ್ತಷ್ಟು ಬಲ: ವಗೀರ್ ಸೇರ್ಪಡೆ ಮುಂಬೈ,ಜನವರಿ,23,2023(..): ವಗೀರ್ ಸಬ್ ಮೆರಿನ್ ಭಾರತೀಯ ನೌಕಾಪಡೆಗೆ ಸೇರ್ಪಡೆಯಾಗಿದ್ದು ಈ ಮೂಲಕ ನೌಕಾಪಡೆಗೆ ಮತ್ತಷ್ಟು ಬಲ ಬಂದಂತಾಗಿದೆ. ಆತ್ಮನಿರ್ಭರ್ ಯೋಜನೆಯಡಿ ಇದನ್ನ ನಿರ್ಮಿಸಲಾಗಿದ್ದು, ಸ್ವದೇಶಿ ನಿರ್ಮಿತ ಜಲಂತರ್ಗಾಮಿ ನೌಕೆಗಳ ಇತಿಹಾಸದಲ್ಲೇ ಇದು ಅತ್ಯಂತ ಕಡಿಮೆ ಸಮಯದಲ್ಲಿ ನಿರ್ಮಾಣವಾಗಿದೆ. ಐದನೇ ಕಲ್ವರಿ ದರ್ಜೆಯ ಜಲಾಂತರ್ಗಾಮಿ ಐಎನ್‌ಎಸ್ ವಗೀರ್ ಭಾರತೀಯ ನೌಕಾಪಡೆಗೆ ಇಂದು ಮುಂಬೈನಲ್ಲಿ ಸೇರ್ಪಡೆಗೊಂಡಿದೆ. ಐಎನ್ ಎಸ್ ವಗೀರ್ ನೌಕೆಯನ್ನು ಕರಾವಳಿ ಹಾಗೂ ಸಮುದ್ರದಲ್ಲಿ ನಿಯೋಜಿಸಬಹುದು ಎಂದು ಕಮಾಂಡಿಂಗ್ ಆಫೀಸರ್ ಕಮಾಂಡರ್ ದಿವಾಕರ್ ಎಸ್ ಹೇಳಿದ್ದಾರೆ. ಇದು ನೌಕಾಪಡೆ ಮತ್ತು ದೇಶದ ಎಲ್ಲಾ ಅಗತ್ಯಗಳನ್ನು ಪೂರೈಸುವ ಸಾಮರ್ಥ್ಯವನ್ನು ಹೊಂದಿದೆ. : - – - -