ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಆ ಪಕ್ಷಕ್ಕೆ ಯಾರು ಹೋಗ್ತಾರೆ- ಡಿಕೆ ಶಿವಕುಮಾರ್ ಗೆ ಬಿಜೆಪಿ ಶಾಸಕ ತಿರುಗೇಟು. ಹಾವೇರಿ,ಜನವರಿ,21,2023(..):ಹಾವೇರಿಯಲ್ಲಿ ಇಬ್ಬರು ಬಿಜೆಪಿ ಶಾಸಕರು ಕಾಂಗ್ರೆಸ್ ಬರಲು ಸಜ್ಜಾಗಿದ್ದಾರೆ. ಆದರೆ ಸ್ಥಾನ ಖಾಲಿ ಇಲ್ಲ ಎಂದು ಕರೆದುಕೊಂಡಿಲ್ಲ ಎಂದು ಹೇಳಿಕೆ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಬಿಜೆಪಿ ಶಾಸಕ ವಿರೂಪಾಕ್ಷಪ್ಪ ತಿರುಗೇಟು ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಶಾಸಕ ವಿರೂಪಾಕ್ಷಪ್ಪ, ಡಿಕೆ ಶಿವಕುಮಾರ್ ಸಾಯಂಕಾಲ ಮಾತನಾಡಿರಬಹುದು.ಡಿ ಕೆಶಿ ಸಾಯಂಕಾಲ ಡಬಲ್ ಆಗುತ್ತಾರೆ. ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು. ಆ ಪಕ್ಷಕ್ಕೆ ಯಾರು ಹೋಗುತ್ತಾರೆ. ಯಾವುದೇ ಶಾಸಕ ಬಿಜೆಪಿ ಬಿಟ್ಟು ಕಾಂಗ್ರೆಸ್ ಗೆ ಹೋಗಲ್ಲ. ಬಿಜೆಪಿಯಲ್ಲಿ ಟಿಕೆಟ್ ಕೊಡಲಿ ಬಿಡಲಿ ಬಿಜೆಪಿಯಲ್ಲೇ ಇರುತ್ತೇನೆ ಎಂದು ಸ್ಪಷ್ಟನೆ ನೀಡಿದರು. : – -- - – .