ಭಾರತ ಇಂದು ಬೇಡುವ ರಾಷ್ಟ್ರವಲ್ಲ ಕೊಡುವ ರಾಷ್ಟ್ರ: ಕರ್ನಾಟಕ ಅಭಿವೃದ್ಧಿಗೆ ಬದ್ಧ-ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ. ವಿಜಯಪುರ,ಜನವರಿ,21,2023(..):ಭಾರತ ಇಂದು ಬೇಡುವ ರಾಷ್ಟ್ರವಲ್ಲ ಕೊಡುವ ರಾಷ್ಟ್ರವಾಗಿದೆ. ಕರ್ನಾಟಕದ ಅಭಿವೃದ್ಧಿಗೆ ಬದ್ಧರಾಗಿದ್ದೇವೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆಪಿ ನಡ್ಡಾ ಹೇಳಿದರು. ವಿಜಪುರದ ಸಿಂದಗಿಯಲ್ಲಿ ಬಿಜೆಪಿ ವಿಜಯ ಸಂಕಲ್ಪಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಜೆಪಿ ನಡ್ಡಾ, ಪವಿತ್ರ ಭೂಮಿ ವಿಜಯಪುರಕ್ಕೆ ನನ್ನ ನಮನ ಸಲ್ಲಿಸುತ್ತೇನೆ. ಜ್ಞಾನಯೋಗಶ್ರಮಕ್ಕೆ ಭೇಟಿ ನೀಡಿ ಶ್ರೀಗಳ ಆಶೀರ್ವಾದ ಪಡೆದಿದ್ದೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಕಾರಕ್ಕೆ ಬರಲಿದೆ ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ತತ್ವ. ಕರ್ನಾಟಕ ರಾಜ್ಯವನ್ನ ಅಭಿವೃದ್ಧಿಯತ್ತ ತೆಗೆದುಕೊಡು ಹೋಗುತ್ತೇವೆ ಭಾರತದ ಅಭಿವೃದ್ಧಿಯಲ್ಲಿ ಕರ್ನಾಟಕದ ಕೊಡುಗೆ ಅಪಾರ ಎಂದರು. ದೇಶದಲ್ಲಿ ಮೋದಿ ಸರ್ಕಾರದಿಂದ ಡಿಜಿಟಲ್ ಕ್ರಾಂತಿ ಆಗಿದೆ. 2014ಕ್ಕಿಂತ ಮೊದಲು ವಿದೇಶದಿಂದ ಮೊಬೈಲ್ ಅಮದು ಮಾಡಿಕೊಳ್ಳಲಾಗುತ್ತಿತ್ತು. ಈಗ ದೇಶದಲ್ಲಿ ಮೊಬೈಲ್ ಉದ್ಪಾದನೆ ಮಾಡಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಅಡಿ ಮೊಬೈಲ್ ಉತ್ಪಾದನೆ ಮಾಡತ್ತಿದ್ದೇವೆ. ಆಟೋ ಮೊಬೈಲ್ ಇಂಡಸ್ಟ್ರಿಯಲ್ಲಿ ಭಾರತ 3ನೇ ಸ್ಥಾನದಲ್ಲಿದೆ. ಎಂದು ನುಡಿದರು. ದೇಶದಲ್ಲಿ 100 ಕೋಟಿಗೂ ಹೆಚ್ಚು ಜನರಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಕೋವಿಡ್ ವೇಳೆ ಅನೇಕ ರಾಷ್ಟ್ರಿಗಳಿಗೆ ಕೋವಿಡ್ ರಪ್ತು ಮಾಡಿದ್ದೇವೆ. ಭಾರತ ಇಂದು ಬೇಡುವ ರಾಷ್ಟ್ರವಲ್ಲ ಕೊಡುವ ರಾಷ್ಟ್ರ. ಬಿಎಸ್ ವೈ, ಬೊಮ್ಮಾಯಿ ನೇತೃತ್ವದಲ್ಲಿ ಕರ್ನಾಟಕದ ಅಭಿವೃದ್ದಿಯಾಗುತ್ತಿದೆ. ನಮ್ಮ ಸರ್ಕಾರ ಅನೇಕ ಯೋಜನೆಗಳನ್ನ ಜಾರಿಗೆ ತಂದಿದೆ ಎಂದರು. : -- -