ಬಿ.ಕೆ ಹರಿಪ್ರಸಾದ್ ಗೆ ಗ್ರಾ.ಪಂ ಚುನಾವಣೆ ಗೆಲ್ಲುವ ಯೋಗ್ಯತೆ ಇಲ್ಲ- ಶಾಸಕ ಕೆ.ಎಸ್ ಈಶ್ವರಪ್ಪ ಶಿವಮೊಗ್ಗ,ಜನವರಿ,21,2023(..):ವೇಶ್ಯೆಯರಂತೆ ಹಲವರು ತಮ್ಮ ಶಾಸಕ ಸ್ಥಾನ ಮಾರಿಕೊಂಡು ಬಿಜೆಪಿಗೆ ಹೋದರು ಎಂಬ ವಿಧಾನಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹೇಳಿಕೆಗೆ ಶಾಸಕ ಕೆ.ಎಸ್ ಈಶ್ವರಪ್ಪ ಕಿಡಿಕಾರಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಕಾಲೇಜು ದಿನದಿಂದಲೇ ಬಿ.ಕೆ ಹರಿಪ್ರಸಾದ್ ಗೂಂಡಾ ಲೀಡರ್ ಎಂದು ಖ್ಯಾತಿ ಪಡೆದಿದ್ದಾರೆ. ಬಿಕೆ ಹರಿ ಪ್ರಸಾದ್ ಚುನಾವಣೆಯಲ್ಲಿ ಗೆದ್ದಿಲ್ಲ. ಅವರಿಗೆ ಗ್ರಾಮ ಪಂಚಾಯತ್ ಚುನವಣೆಯಲ್ಲೂ ಗೆಲ್ಲುವ ಯೋಗ್ಯತೆ ಇಲ್ಲ. ಹರಿಪ್ರಸಾದ್ ಬಳಸಿದ ಪದ ನಾನು ಬಳಸಲ್ಲ.ಕಟೀಲ್ ಬಗ್ಗೆ ಮಾತನಾಡುವ ಯೋಗ್ಯತೆ ಅವರಿಗಿಲ್ಲ ಎಂದು ಕಿಡಿಕಾರಿದರು. : - – – – .--