ಬಿಜೆಪಿ ಶಾಸಕ ಸಿದ್ಧು ಸವದಿ ವಿರುದ್ಧ ಲೋಕಾಯುಕ್ತಕ್ಕೆ ದೂರು. ಬೆಂಗಳೂರು,ಜನವರಿ,20,2023(..):ಅಕ್ರಮ ಆಸ್ತಿ ಸಂಪಾದನೆ ಆರೋಪದ ಮೇಲೆ ಬಾಗಲಕೋಟೆ ತೆರದಾಳ ಕ್ಷೇತ್ರದ ಬಿಜೆಪಿ ಶಾಸಕ ಸಿದ್ಧು ಸವದಿ ವಿರುದ್ದ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ತೆರದಾಳ ಕ್ಷೇತ್ರದ ಹಳಂಗಳಿ ನಿವಾಸಿ ರಾಜು ದೇಸಾಯಿ ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಆರೋಪ ಸಂಬಂಧ ಆಸ್ತಿ ಖರೀದಿ ಮೂಲ ಯಾವುದು ಎಂಬ ಬಗ್ಗೆ ತನಿಖೆಗೆ ಆಗ್ರಹಿಸಿದ್ದಾರೆ. ತೆರದಾಳ ಶಾಸಕ ಸಿದ್ದು ಸವದಿ, ಸಹೋದರರಾದ ಏಗಪ್ಪ ಸವದಿ ರಾಮಣ್ಣ ಸವದಿ ವಿರುದ್ಧ ಸೂಕ್ತ ತನಿಖೆ ನಡೆಸುವಂತೆ ದೂರು ನೀಡಿದ್ದಾರೆ ಎನ್ನಲಾಗಿದೆ. : – - - - .