ಕಾಂಗ್ರೆಸ್ ನ ಉಚಿತ ವಿದ್ಯುತ್, ಗೃಹಲಕ್ಷ್ಮಿ ಯೋಜನೆ ಘೋಷಣೆ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಟೀಕೆ. ಬೆಂಗಳೂರು,ಜನವರಿ,17,2023(..):ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್, ಹಾಗೂ ಮಹಿಳೆಯರಿಗಾಗಿ ಗೃಹಲಕ್ಷ್ಮಿ ಯೋಜನೆ ಜಾರಿ ಮಾಡುವುದಾಗಿ ಕಾಂಗ್ರೆಸ್ ಘೋಷಿಸಿರುವ ಬಗ್ಗೆ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ವ್ಯಂಗ್ಯವಾಡಿದ್ದಾರೆ. ಈ ಕುರಿತು ಮಾತನಾಡಿರುವ ಸಿಎಂ ಇಬ್ರಾಹಿಂ, ರಾಜಸ್ತಾನದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ರಾಜಸ್ತಾನದಲ್ಲಿ ಏನೇನು ಉಚಿತ ಕೊಟ್ಟಿದ್ದಾರೆ. ಪ್ರಿಯಾಂಕ ಗಾಂಧಿಗೆ ಏನು ಗೊತ್ತಿಲ್ಲ. ಡಿಕೆ ಶಿವಕುಮಾರ್ ಆದರೂ ಹೇಳೀಕೊಡಬೇಕಲ್ಲ. ರಾಜಸ್ತಾನದಲ್ಲೇನು ದರಿದ್ರ ಲಕ್ಷ್ಮಿ ಇದ್ದಾರಾ..? ಅಲ್ಲಿಯೂ ಕೂಡ ಗೃಹಲಕ್ಷ್ಮಿಯೇ ಅಲ್ವಾ ಇರೋದು. ಬಜೆಟ್ ಲೆಕ್ಕ ಹಾಕದೇ ಉಚಿತ ಘೋಷಣೆ ಮಾಡಿದ್ದಾರೆ ಎಂದು ಟೀಕಿಸಿದರು. : - - - - - .