ಅಂಚೆ ಇಲಾಖೆ ಸೇರಬಯಸುವವರಿಗೆ ಅವಕಾಶ: ಶೀಘ್ರವೇ ನೇಮಕಾತಿ ಅಧಿಸೂಚನೆ ಬೆಂಗಳೂರು, ಜನವರಿ 15, 2023 (..):ಅಂಚೆ ಇಲಾಖೆ ಪೋಸ್ಟ್‌ಮ್ಯಾನ್, ಮೈಲ್​ಗಾರ್ಡ್ ಮತ್ತು ಇತರ ಹಲವು ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಲಿದೆ. ಅಂಚೆ ಇಲಾಖೆಯು 2023 ರಲ್ಲಿ ಹಲವು ಹುದ್ದೆಗಳ ನೇಮಕಾತಿಗೆ ಶೀಘ್ರದಲ್ಲೇ ಅಧಿಸೂಚನೆ ಬಿಡುಗಡೆ ಮಾಡಲಿದೆ. ಹುದ್ದೆಗಳವಿವರಗಳು: ಪೋಸ್ಟ್​ಮ್ಯಾನ್- 59,099 ಹುದ್ದೆಗಳ, ಮೈಲ್​ಗಾರ್ಡ್​- 1,445 ಹುದ್ದೆಗಳು, ಮಲ್ಟಿ ಟಾಸ್ಕಿಂಗ್ ()- 37,539 ಹುದ್ದೆಗಳು, ಒಟ್ಟು ಹುದ್ದೆಗಳು- 98,083 ಹುದ್ದೆಗಳು. ಕರ್ನಾಟಕದಲ್ಲಿ 3887 ಪೋಸ್ಟ್​ಮ್ಯಾನ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಹಾಗೆಯೇ 90 ಮೈಲ್​ಗಾರ್ಡ್ ಹಾಗೂ 1754 ಮಲ್ಟಿ ಟಾಸ್ಕಿಂಗ್ () ಹುದ್ದೆಗಳಿಗೂ ಅರ್ಜಿ ಸಲ್ಲಿಸಬಹುದಾಗಿದೆ. ಈ ಕುರಿತಾದ ಹೆಚ್ಚಿನ ಮಾಹಿತಿಗಾಗಿ ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್..inಗೆ ಭೇಟಿ ನೀಡಬಹುದು.