ಮೋದಿ ಅವರು ಉದ್ಘಾಟಿಸುವುದು ಉತ್ಸವವನ್ನಲ್ಲ, ಯುವಕರ ಭವಿಷ್ಯಕ್ಕೆ ಬಿಜೆಪಿ ತೋಡಿದ ಸಮಾಧಿಯನ್ನ- ರಾಜ್ಯ ಕಾಂಗ್ರೆಸ್. ಬೆಂಗಳೂರು,ಜನವರಿ,12,2023(..):ಹುಬ್ಬಳ್ಳಿಯಲ್ಲಿ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮಿಸುತ್ತಿರುವ ಹಿನ್ನೆಲೆ ರಾಜ್ಯಕಾಂಗ್ರೆಸ್ ಟ್ವಿಟ್ ಮಾಡಿ ಬಿಜೆಪಿಗೆ ಕುಟುಕಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಯುವಕರಿಗೆ ಪಕೋಡಾ ಮಾರುವ ಸಲಹೆ ನೀಡಿದ ಮೋದಿ ಅವರೇ, ಯುವಜನೋತ್ಸವ ಎಂದರೆ ಸಿನೆಮಾ ತಾರೆಯರನ್ನು ಕರೆಸಿ ಹಾಡು, ಡ್ಯಾನ್ಸುಗಳ ಕಾರ್ಯಕ್ರಮ ಮಾಡುವುದಲ್ಲ. ರಾಜ್ಯದಲ್ಲಿ 1500ಕ್ಕೂ ಹೆಚ್ಚು ಯುವಜನರು ನಿರುದ್ಯೋಗದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಯುವಜನರ ಈ ಸಾವು ಹಾಗೂ ನೋವಿನ ಬಗ್ಗೆ ತಾವು ಮೌನ ಮುರಿಯುವಿರಾ? ಎಂದು ಪ್ರಶ್ನಿಸಿದೆ. ಹಾಗೆಯೇ ಯುವಜನರ ಭವಿಷ್ಯವನ್ನು ಸಮಾಧಿ ಮಾಡಿದ ಬಿಜೆಪಿ ಸರ್ಕಾರ ರ್ಕಾರ, ಈಗ ಆ ಸಮಾಧಿ ಮೇಲೆ ಉತ್ಸವ ಮಾಡುತ್ತಿದೆ. ಯುವಜನರ ಉದ್ಯೋಗ ಮಾರಟ, ಶಿಷ್ಯವೇತನ ನೀಡದೆ ಯುವಜನರ ಶಿಕ್ಷಣಕ್ಕೆ ದ್ರೋಹ, , , ಅಭ್ಯರ್ಥಿಗಳಿಗೆ ವಂಚನೆ. ಮೋದಿ ಅವರು ಉದ್ಘಾಟಿಸುವುದು ಉತ್ಸವವನ್ನಲ್ಲ, ಯುವಕರ ಭವಿಷ್ಯಕ್ಕೆ ಬಿಜೆಪಿ ತೋಡಿದ ಸಮಾಧಿಯನ್ನ ಎಂದು ಕಿಡಿಕಾರಿದೆ. ಇದೇ ವೇಳೆ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಡೆಗಣನೆ ವಿಚಾರ ಕುರಿತು ಟೀಕಿಸಿದ ಕಾಂಗ್ರೆಸ್, ಹುಬ್ಬಳ್ಳಿಯಲ್ಲೇ ನಡೆಯುತ್ತಿರುವ ಪ್ರಧಾನಿ ಕಾರ್ಯಕ್ರಮದಲ್ಲಿ ಅದೇ ಕ್ಷೇತ್ರದ ಶಾಸಕ ಜಗದೀಶ್ ಶೆಟ್ಟರ್ ಅವರನ್ನು ಬಿಜೆಪಿ ಕಡೆಗಣಿಸಿದೆ. ಅವರದ್ದೇ ಕ್ಷೇತ್ರದಲ್ಲಿ ಅವರನ್ನೇ ಕಡೆಗಣಿಸುತ್ತಿರುವುದು ಇದು ಎರಡನೇ ಬಾರಿ. ವಿರುದ್ಧ ಕಟೀಲ್ + ಸಂತೋಷ್ ಜೋಡಿಯಾದರೆ, ಶೆಟ್ಟರ್ ವಿರುದ್ಧ ಬೊಮ್ಮಾಯಿ + ಜೋಶಿ ಜೋಡಿಯಾಗಿದ್ದಾರೆ ಎಂದು ವ್ಯಂಗ್ಯವಾಡಿದೆ. : - - – - -