ಕಳೆದ ಚುನಾವಣೆಯಲ್ಲಿ ಸಾಲ ಮಾಡಿದ್ದು ನಿಜ: ಸಿದ್ಧರಾಮಯ್ಯ ಬರ್ತೀನಿ ಅಂದಿದ್ದಕ್ಕೆ ಕ್ಷೇತ್ರ ಬಿಟ್ಟುಕೊಟ್ಟೆ- ಶ್ರೀನಿವಾಸ್ ಗೌಡ ಸ್ಪಷ್ಟನೆ. ಕೋಲಾರ,ಜನವರಿ,11,2023(..): ತನ್ನ ಮತ್ತು ಮುಖಂಡರೊಬ್ಬರ ನಡುವಿನ ಆಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ ಕೋಲಾರ ಕ್ಷೇತ್ರದ ಜೆಡಿಎಸ್ ಉಚ್ಛಾಟಿತ ಶಾಸಕ ಶ್ರೀನಿವಾಸ್ ಗೌಡ ಸ್ಪಷ್ಟನೆ ನೀಡಿದ್ದಾರೆ. ಕಳೆದ ಚುನಾವಣೆಯಲ್ಲಿ ಸಾಲ ಮಾಡಿದ್ದು ನಿಜ. ನನ್ನ ಸಾಲ ಬಾಕಿ ಇದೆ. ಈ ನಡುವೆ ಮತ್ತೊಂದು ಚುನಾವಣೆ ಕಷ್ಟ. ಸಿದ್ಧರಾಮಯ್ಯ ಬರ್ತೀನಿ ಅಂದಿದ್ದಕ್ಕೆ ಕ್ಷೇತ್ರ ಬಿಟ್ಟುಕೊಟ್ಟೆ ಎಂದು ಶ್ರೀನಿವಾಸ್ ಗೌಡ ಹೇಳಿದ್ದಾರೆ. ಈ ಕುರಿತು ಮಾತನಾಡಿದ ಶ್ರೀನಿವಾಸ್ ಗೌಡ, ನಾನು ಸಿದ‍್ಧರಾಮಯ್ಯಗೆ ಯಾವುದೇ ಬೇಡಿಕೆ ಇಟ್ಟಿಲ್ಲ. ಸಿದ್ದರಾಮಯ್ಯ ಸ್ಪರ್ಧಿಸುವುದಾಗಿ ಹೇಳಿದಕ್ಕೆ ಕ್ಷೇತ್ರ ಬಿಟ್ಟುಕೊಟ್ಟೆ. ಸಿದ‍್ಧರಾಮಯ್ಯ ಸಿಎಂ ಆಗಿ ರಾಜ್ಯದ ಕಡೆ ಗಮನ ಹರಿಸಲಿ. ಕ್ಷೇತ್ರ ಜವಾಬ್ದಾರಿ ನಾನೇ ನೋಡಿಕೊಳ್ಳುತ್ತೇನೆ. ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಎಂಎಲ್ ಸಿ ಮಾಡಿ ಮಂತ್ರಿ ಮಾಡಿದರೇ ಬೇಡ ಅನ್ನಲ್ಲ. ಸಿದ್ದರಾಮಯ್ಯ ಕೋಲಾರಕ್ಕೆ ಬಂದೇ ಬರ್ತಾರೆ. ಗೆದ್ದೇ ಗೆಲ್ತಾರೆ ಎಂದು ಹೇಳಿದರು. : – - - – –