ಸಿದ್ಧರಾಮಯ್ಯಗೆ ಕೋಲಾರ ಕ್ಷೇತ್ರವೂ ಸೇಫ್ ಅಲ್ಲ- ಸಚಿವ ಗೋವಿಂದ ಕಾರಜೋಳ. ಬಾಗಲಕೋಟೆ,ಜನವರಿ,11,2023(.):ಮಾಜಿ ಸಿಎಂ ಸಿದ್ಧರಾಮಯ್ಯ ಕೋಲಾರ ಸ್ಪರ್ಧೆ ಬಗ್ಗೆ ಬಿಜೆಪಿ ಹಲವು ನಾಯಕರು ಟೀಕೆ ವ್ಯಕ್ತಪಡಿಸಿದ್ದಾರೆ. ಜಲಸಂಪನ್ಮೂಲ ಸಚಿವ ಗೋವಿಂಧ ಕಾರಜೋಳ ಸಹ ಸಿದ್ಧರಾಮಯ್ಯ ಸ್ಪರ್ಧೆ ಬಗ್ಗೆ ಲೇವಡಿ ಮಾಡಿದ್ದಾರೆ. ಈ ಕುರಿತು ಮಾತನಾಡಿದ ಸಚಿವ ಗೋವಿಂದ ಕಾರಜೋಳ, ಸಿಎಂ ಆದವರು ಡಿಸಿಎಂ ಆದವರು ಅಂಥವರು ಕ್ಷೇತ್ರಕ್ಕಾಗಿ ಅಲೆದಾಡುತ್ತಿದ್ದಾರೆ. ಸಿದ್ಧರಾಮಯ್ಯಗೆ ಕೋಲಾರವೂ ಸೇಫ್ ಅಲ್ಲ ಸಿದ್ದರಾಮಯ್ಯ ಕೋಲಾರದಲ್ಲಿ ನಿಂತರೂ ಸೋಲ್ತಾರೆ ಜನರ ಪ್ರೀತಿಯಿಂದಾಗಿ ಸ್ಪರ್ಧೆ ಎನ್ನುತ್ತಿದ್ದಾರೆ. ಅ ಮೇಲೆ ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ ಎನ್ನುತ್ತಾರೆ. ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡುತ್ತಾರೆ. ಆದರೆ ಕೋಲಾರದಲ್ಲಿ ಬಿಜೆಪಿಯೇ ಗೆಲ್ಲೋದು ಎಂದು ಗೋವಿಂದ ಕಾರಜೋಳ ಹೇಳಿದರು. : - – – – - .