ಬ್ರೊಕರ್ ಪಾರ್ಟಿಗಿಂತ ಬಿಜೆಪಿಯಲ್ಲಿ ಹೆಚ್ಚು ಭ್ರಷ್ಟಾಚಾರ; ಹಣ ಪತ್ತೆ ಪ್ರಕರಣ ಕುರಿತು ಶಾಸಕ ಜಮೀರ್ ಅಹ್ಮದ್ ಖಾನ್ ಟೀಕೆ. ಹುಬ್ಬಳ್ಳಿ,ಜನವರಿ,6,2023(..):ವಿಧಾನಸೌಧದಲ್ಲಿ 10 ಲಕ್ಷ ರೂ. ಹಣ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್, ಬ್ರೊಕರ್ ಪಾರ್ಟಿಗಿಂತ ಬಿಜೆಪಿಯಲ್ಲಿ ಹೆಚ್ಚು ಭ್ರಷ್ಟಾಚಾರವಿದೆ. ಎಲ್ಲದರಲ್ಲೂ ಬರೀ ಭ್ರಷ್ಟಾಚಾರವನ್ನೆ ಮಾಡಿ ಹಣ ಸಂಪಾದಿಸಿದ್ದಾರೆ ಎಂದು ಕಿಡಿಕಾರಿದರು. ಹುಬ್ಬಳ್ಳಿಯಲ್ಲಿ ಮಾತನಾಡಿದ ಶಾಸಕ ಜಮೀರ್ ಅಹ್ಮದ್ ಖಾನ್, ವಿಧಾನಸೌಧಕ್ಕೆ ಇಂಜನಿಯರ್ ಯಾಕೆ ದುಡ್ಡು ತೆಗೆದುಗೊಂಡು ಹೋಗಿದ್ದ. ಲಂಚ ಇರಬೇಕು. ಇಲ್ಲ ವರ್ಗಾವಣೆ ಇರಬೇಕು ಅಷ್ಟೆ. ಬಿಜೆಪಿ ಬ್ರೋಕರ್ ಪಾರ್ಟಿಗಿಂತ ಹೆಚ್ಚು. ಅಲ್ಲಿ ಬರಿ ಭ್ರಷ್ಟಾಚಾರವಿದೆ. ಧರ್ಮದ ಆಧಾರದ ಮೇಲೆ ಅಧಿಕಾರಕ್ಕೆ ಬಂದು ಹಣ ಮಾಡುತ್ತಿದ್ದಾರೆ ಎಂದು ಗುಡುಗಿದರು. : – - - -