1.28 ಕೋಟಿ ರೂ. ಮೌಲ್ಯದ ಖೋಟಾನೋಟು ಪೊಲೀಸರ ವಶಕ್ಕೆ : ಮೂವರ ಬಂಧನ. ಬೆಂಗಳೂರು,ಜನವರಿ,6,2023(..):ಬೆಂಗಳೂರು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಖೋಟಾನೋಟು ಚಲಾವಣೆ ಮಾಡುತ್ತಿದ್ದ ಮೂವರು ಆರೋಪಿಗಳನ್ನ ಬಂಧಿಸಿದ್ದಾರೆ. ತಮಿಳುನಾಡು ಮೂಲದ ಪಿಚ್ಚು, ನಲ್ಲಕಣಿ, ಸುಬ್ರಹ್ಮಣಿಯನ್ ಬಂಧಿತಾ ಆರೋಪಿಗಳು. ಬಂಧಿತರ ಬಳಿ ಇದ್ದ 1 ಕೋಟಿ 28 ಲಕ್ಷ 68 ಸಾವಿರ ರೂ. ಮೌಲ್ಯದ ಖೋಟಾನೋಟನ್ನ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬಂಧಿತರು ನಕಲಿ ನೋಟು ನೀಡಿ ಅಸಲಿ ನೋಟು ಪಡೆಯಲು ಬಂದಿದ್ದರು. ಈ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. : - -1.28 .- -