ವಿಧಾನಸೌಧವನ್ನ ದೊಡ್ಡ ಶಾಪಿಂಗ್ ಮಾಲ್ ಮಾಡಿ ಹುದ್ದೆಗಳನ್ನ ಖರೀದಿಗೆ ಇಟ್ಟಿದ್ದಾರೆ- ಸರ್ಕಾರದ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ. ಕಲ್ಬುರ್ಗಿ,ಜನವರಿ,6,2023(..):ಬಿಜೆಪಿಯವರು ವಿಧಾನಸೌಧವನ್ನ ದೊಡ್ಡ ಶಾಪಿಂಗ್ ಮಾಲ್ ಮಾಡಿ ಪಿಎಸ್ ಐ, ಎಇ ಹುದ್ದೆಗಳನ್ನ ಖರೀದಿಗೆ ಇಟ್ಟಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದರು. ಈ ಕುರಿತು ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ಬಿಜೆಪಿಯಿಂದ ಭ್ರಷ್ಟಚಾರ ರಾಜ್ಯ ಅನ್ನೋ ಬಿರುದು ಸಿಕ್ಕಿದೆ. ಬಿಜೆಪಿ ಅಂದರೆ ಬ್ರೋಕರ್ ಜನತಾ ಪಕ್ಷ. ಬಿಜೆಪಿ ವಿಧಾನಸೌಧವನ್ನ ದೊಡ್ಡ ಶಾಪಿಂಗ್ ಮಾಲ್ ಮಾಡಿದ್ದಾರೆ. ಈ ಶಾಪಿಂಗ್ ಮಾಲ್ ನಲ್ಲಿ ವರ್ಗಾವಣೆ ಪೋಸ್ಟಿಂಗ್ ಕಾಮಗಾರಿ, ಉದ್ಯೋಗ ಖರೀದಿ ಮಾಡಬಹುದು. ಇಲ್ಲಿ ಉನ್ನತಾಧಿಕಾರಿಗಳು ಶಾಸಕರೇ ಸೇಲ್ಸ್ ಮನ್ . ಮುಖ್ಯಮಂತ್ರಿಗಳು ಹೈಕಮಾಂಡ್ ಗೆ ಮಧ್ಯವರ್ತಿ, ಸಿಎಂಗೆ ಸಚಿವರು ಮಧ್ಯವರ್ತಿ , ಸಚಿವರಿಗೆ ಶಾಸಕರು ಧಿಕಾರಿಗಳೇ ಮಧ್ಯವರ್ತಿ. ವರ್ಗಾವಣೆ ಸೋಷಿಯಲ್ ವರ್ಕ್ ಅಂತೆ ಎಂದು ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು. : – - - – -.