ಪ್ರೇರಣಾ ಪರೀಕ್ಷೆ ಉದ್ಘಾಟನೆ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಮತ್ತು ಪೋಷಕರೊಂದಿಗೆ ಶಾಸಕ ಎಸ್.ಎ ರಾಮದಾಸ್ ಸಂವಾದ. ಮೈಸೂರು,ಜನವರಿ,4,2022(..):100% ಫಲಿತಾಂಶದ ಕುರಿತು ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಮೈಸೂರು ಕೆ.ಆರ್ ಕ್ಷೇತ್ರದ ಶಾಸಕ ಎಸ್ಎ.ರಾಮದಾಸ್ ಸಂವಾದ ಕಾರ್ಯಕ್ರಮ ನಡೆಸಿದರು. ಸರ್ಕಾರಿ ಪ್ರೌಢ ಶಾಲೆ ಕನಕಗಿರಿಯಲ್ಲಿ ಶಾಸಕ ಎಸ್.ಎ.ರಾಮದಾಸ್ ಅವರು ದಕ್ಷಿಣ ವಲಯ ವ್ಯಾಪ್ತಿಯ ... ಮಕ್ಕಳಿಗೆ ನಡೆಸಲಾಗುತ್ತಿರುವ “ಪ್ರೇರಣಾ” ಪರೀಕ್ಷೆಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಹಾಜರಿದ್ದ ಪೋಷಕರೊಡನೆ ಸಂವಾದ ನಡೆಸಿ 2023 ನೇ ಏಪ್ರಿಲ್ ನಲ್ಲಿ ನಡೆಯಲಿರುವ ವಾರ್ಷಿಕ ಪರೀಕ್ಷೆಯಲ್ಲಿ ಶೇ 100% ರಷ್ಟು ಫಲಿತಾಂಶ ಪಡೆಯುವ ಬಗ್ಗೆ ಮಾರ್ಗದರ್ಶನ ನೀಡಿದರು. ಈ ಸಂದರ್ಭದಲ್ಲಿ ಎಲ್ಲಾ ಪೋಷಕರು ಮತ್ತು ವಿದ್ಯಾರ್ಥಿಗಳಿಂದ ಶೇ 100% ಅಂಕಗಳನ್ನು ಗಳಿಸುವ ಬಗ್ಗೆ ಪ್ರಮಾಣ ಮಾಡಿಸಲಾಯಿತು. ಜಿಲ್ಲಾ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಆರ್.ರಾಮಾರಾಧ್ಯ, ಬಿ.ಆರ್.ಸಿ.ಶ್ರೀಕಂಠ ಸ್ವಾಮಿ, ಶಿಕ್ಷಕರ ಸಂಘದ ಜಿಲ್ಲಾದ್ಯಕ್ಷ ಸೋಮೇಗೌಡ, ಬಿ.ಆರ್.ಪಿ ಶ್ರೀಕಂಠ ಶಾಸ್ತ್ರಿ, ಶಾಲಾ ಮುಖ್ಯ ಶಿಕ್ಷಕಿ ಕೆ.ಆರ್.ಉಷಾ ಹಾಗೂ ಎಲ್ಲಾ ಅನುಪಾಲನಾಧಿಕಾರಿಗಳು ಹಾಜರಿದ್ದರು. : - - – - – .