ಮೈಸೂರಿನಲ್ಲಿ ಗ್ಯಾಸ್ ಸಿಲೆಂಡರ್ ಸ್ಫೋಟ: ಐದು ಮಂದಿಗೆ ಗಾಯ. ಮೈಸೂರು,ಜನವರಿ,4,2023(..):ಬೆಳ್ಳಂ ಬೆಳಗ್ಗೆ ಮೈಸೂರಿನಲ್ಲಿ ಮನೆಯೊಂದರಲ್ಲಿ ಗ್ಯಾಸ್ ಸಿಲೆಂಡರ್ ಸ್ಫೋಟಗೊಂಡು 5 ಮಂದಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ಬೆಳ್ಳಿಗೆ 7.15 ರಲ್ಲಿ ಮೈಸೂರಿನ ಬನ್ನಿಮಂಟಪದ ಬಳಿ ಇರುವ ಅಗ್ನಿಶಾಮಕ ವಸತಿ ಗೃಹದಲ್ಲಿ ಘಟನೆ ನಡೆದಿದೆ. ಹಾಲು ಕಾಯಿಸಲು ಹೋಗಿ ಈ ದುರ್ಘಟನೆ ಸಂಭವಿಸಿದ್ದು, ಇಬ್ಬರು ಮಕ್ಕಳು ಸೇರಿ 5 ಜನರಿಗೆ ಗಾಯಗಳಾಗಿದೆ. ಘಟನೆಯಲ್ಲಿ ಗೀತಾ(34) ಮಗಳು ಮೌನ(10) ಮಗ ಮಿತ್ತುನ್(6) ಹಾಗೂ ಪಕ್ಕದ ಮನೆ ಸವಿತಾ (38) ಭಾಗ್ಯಮ್ಮ(62)ಗೆ ಗಾಯಗಳಾಗಿದೆ. ಗೃಹಿಣಿ ಗೀತಾ(34)ಗೆ ಗಂಭೀರ ಗಾಯಗಳಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೈಸೂರಿನ ಎನ್.ಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. : - – -10 -