ಹರಿಯಾಣದಲ್ಲಿ ಲಘು ಭೂಕಂಪ: ದಿಲ್ಲಿಯಲ್ಲೂ ಕಂಪಿಸಿದ ಭೂಮಿ ಬೆಂಗಳೂರು, ಜನವರಿ 01, 2023 (..):ಹರಿಯಾಣದಲ್ಲಿಇಂದು ಲಘು ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪನದ ತೀವ್ರತೆ 3.8 ದಾಖಲಾಗಿದೆ ಎಂದು ನ್ಯಾಶನಲ್‌ ಸೆಂಟರ್‌ ಫಾರ್‌ ಸಿಸ್ಮಾಲಜಿ ತಿಳಿಸಿದೆ. ಇದರ ಜತೆಗೆ ದಿಲ್ಲಿಯಲ್ಲೂ ಭೂಕಂಪಿಸಿದ ಅನುಭವ ಆಗಿದೆ. ಭೂಮಿಯಿಂದ 5 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ ನ್ಯಾಶನಲ್‌ ಸೆಂಟರ್‌ ಫಾರ್‌ ಸಿಸ್ಮಾಲಜಿ ಅಧಿಕಾರಿಗಳು ತಿಳಿಸಿದ್ದಾರೆ. ಭಾನುವಾರ 1.19 ಗೆ ಲಘಯು ಭೂಕಂಪ ಸಂಭವಿಸಿದೆ. ಹರಿಯಾಣದ ಜಾಜ್ಜರ್‌ ಎಂಬಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು. ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.