ಗುಡಿಸಲಿಗೆ ಬೆಂಕಿ: ಓರ್ವ ವ್ಯಕ್ತಿ ಸಜೀವ ದಹನ. ಬೀದರ್,ಡಿಸೆಂಬರ್,31,2022(..):ಗುಡಿಸಲಲ್ಲಿ ಬೆಂಕಿ ಕಾಣಿಸಿಕೊಂಡು ಓರ್ವ ವ್ಯಕ್ತಿ ಸಜೀವ ದಹನವಾಗಿರುವ ಘಟನೆ ಬೀದರ್ ನಲ್ಲಿ ನಡೆದಿದೆ. ಬಾಲ್ಕಿ ತಾಲ್ಲೂಕಿನ ಹರನಾಳ ಗ್ರಾಮದ ಜಮೀನಿನಲ್ಲಿ ಈ ಘಟನೆ ನಡೆದಿದೆ. ಗುಡಿಸಲಿನಲ್ಲಿ ಮಲಗಿದ್ದ ಜಗನ್ನಾಥ ಹಲಗೆ (60) ಸಜೀವ ದಹನವಾಗಿದ್ದಾರೆ. ಜಗನ್ನಾಥ್ ರಕ್ಷಿಸಲು ಹೋದ ಮಾರುತಿಗೆ ಗಾಯಗಳಾಗಿವೆ. ಜಗನ್ನಾಥ್ ಮತ್ತು ಮಾರುತಿ ರಾತ್ರಿ ಗುಡಿಸಲಿನಲ್ಲಿ ಪಾರ್ಟಿ ಮಾಡಿದ್ದರು. ತಡರಾತ್ರಿ ಪಾರ್ಟಿ ಮಾಡಿ ಗುಡಸಲಿನಲ್ಲಿ ಮಲಗಿದ್ದರು. ಈ ವೇಳೆ ಬೆಂಕಿ ಕಾಣಿಸಿಕೊಂಡು ಈ ಅವಘಡ ಸಂಭವಿಸಿದೆ. ಈ ಕುರಿತು ಭಾಲ್ಕಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. : - - - -