ಸಮಾನತೆಯ ಹರಿಕಾರ ಸಿದ್ಧರಾಮಯ್ಯ ಮತ್ತೊಮ್ಮೆ ಸಿಎಂ ಆಗಲಿ : ಬಸವಪ್ರಭು ಸ್ವಾಮೀಜಿ. ಚಿತ್ರದುರ್ಗ,ಡಿಸೆಂಬರ್,30,2022(..): ವಿಪಕ್ಷ ನಾಯಕ ಸಿದ್ಧರಾಮಯ್ಯ ಮತ್ತೊಮ್ಮೆ ಸಿಎಂ ಆಗಬೇಕು ಎಂಬುದು ಅವರ ಅಭಿಮಾನಿಗಳ ಕೂಗಾಗಿದೆ. ಹೀಗಾಗಿ ಸಿದ್ಧರಾಮಯ್ಯ ಹೋದ ಕಡೆಯೆಲ್ಲಾ ಮುಂದಿನ ಸಿಎಂ ಸಿದ್ಧರಾಮಯ್ಯ ಎಂದು ಅಭಿಮಾನಿಗಳು ಘೋಷಣೆ ಕೂಗಿರುವುದು ಸಾಕಷ್ಟು ಬಾರಿ ಕೇಳಿ ಬಂದಿದೆ. ಈ ಮಧ್ಯೆ ಇದೀಗ ಚಿತ್ರದುರ್ಗ ಬೃಹನ್ಮಠದ ಬಸವಪ್ರಭು ಸ್ವಾಮೀಜಿ ಅವರು ಸಿದ್ಧರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ. ಮತ್ತೊಮ್ಮೆ ಸಿಎಂ ಆಗಲಿ ಎಂದು ಹೇಳಿಕೆ ನೀಡಿದ್ದಾರೆ. ಈ ಕುರಿತು ಮಾತನಾಡಿರುವ ಅವರು, ಬಸವಣ್ಣ ಅನ್ನ ದಾಸೋಹ ಮಾಡಿದ್ರು. ಸಿದ್ದರಾಮಯ್ಯ ಅನ್ನಭಾಗ್ಯ ನೀಡಿದ್ದಾರೆ. ಸಿದ್ದರಾಮಯ್ಯ ಸಮಾನತೆಯ ಹರಿಕಾರ, ವೈಚಾರಿಕ ಜ್ಞಾನಿ. ಅವರು ಮತ್ತೊಮ್ಮೆ ಸಿಎಂ ಆಗಬೇಕು. ರಾಜ್ಯಕ್ಕೆ ಸಿದ್ಧರಾಮಯ್ಯನಂತಹ ಆಡಳಿತಗಾರ ಬೇಕು. ಸಿದ‍್ಧರಾಮಯ್ಯರಿಂದ ರಾಜ್ಯ ಬಲಿಷ್ಟವಾಗುತ್ತದೆ. ಸಿದ್ದರಾಮಯ್ಯಗೆ ಜನರ ಆಶೀರ್ವಾದ ಬೇಕು ಎಂದು ಹೇಳಿದ್ದಾರೆ. : –- –-