ಸಿಬ್ಬಂದಿಯಿಂದಲೇ ಬೆಂಗಳೂರು ಜಲಮಂಡಳಿ ವಾಟರ್ ಬಿಲ್ ​ಗೆ ಕನ್ನ: 9 ಮಂದಿ ಬಂಧನ. ಬೆಂಗಳೂರು,ಡಿಸೆಂಬರ್,28,2022(..):ಬೆಂಗಳೂರು ಜಲಮಂಡಳಿ() ವಾಟರ್ ಬಿಲ್​ ಗೆ ಸಿಬ್ಬಂದಿಯೇ ಕನ್ನ ಹಾಕಿರುವ ಘಟನೆ ನಡೆದಿದೆ. ಗ್ರಾಹಕರು ಪಾವತಿಸಿದ್ದ ಹಣವನ್ನು ಜಲಮಂಡಳಿಗೆ ನೀಡದೆ ವಂಚನೆ ಎಸಗಿರುವ ಆರೋಪ ಕೇಳಿ ಬಂದಿದ್ದು ಗ್ರೂಪ್ ಸಿ ಮತ್ತು ಗ್ರೂಪ್​​ ಡಿ ನೌಕರ ಸೇರಿದಂತೆ ಒಟ್ಟು 9 ಜನರನ್ನ ಬೊಮ್ಮನಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ವರದರಾಜು, ಕಿರಣ್ ಕುಮಾರ್, ನಿರ್ಮಲ್ ಕುಮಾರ್, ಚೌಡೇಶ್, ಮಂಜುನಾಥ್, ಮಹದೇವಸ್ವಾಮಿ, ಉಮೇಶ್, ಬಸವರಾಜು ಬಂಧಿತರು. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ವಂಚಿಸಿದ್ದಾರೆ. 2018ರಿಂದ 2022ರವರೆಗೆ ಈ ಅಕ್ರಮ ನಡೆದಿರುವ ಬಗ್ಗೆ ಮಾಹಿತಿ ದೊರೆತಿದೆ. ಒಂದೂವರೆ ಕೋಟಿ ರೂ.ಗೂ ಹೆಚ್ಚು ಹಣ ಸಂಗ್ರಹಿಸಿ ಆರೋಪಿಗಳು ವಂಚನೆ ನಡೆಸಿದ್ದಾರೆ ಎನ್ನಲಾಗಿದೆ. 850ಕ್ಕೂ ಅಧಿಕ ಗ್ರಾಹಕರಿಂದ ಬಿಲ್ ಪಡೆದು ಸರ್ಕಾರಕ್ಕೆ ಕಟ್ಟದೇ ವಂಚನೆ ಎಸಗಲಾಗಿದೆ. ಈ ಬಗ್ಗೆ ಕೋಡಿಚಿಕ್ಕನಹಳ್ಳಿ ಉಪವಿಭಾಗದ ಎಇಇ ದೂರು ನೀಡಿದ್ದು, ಬೊಮ್ಮನಹಳ್ಳಿ ಪೊಲೀಸರಿಂದ ತನಿಖೆ ಮುಂದುವರಿದಿದೆ. : - - - –- 9